ADVERTISEMENT

ಅಬಕಾರಿ ನೀತಿ ಪ್ರಕರಣ: ರಾಜಕೀಯ ಪಕ್ಷ ಬದಲಾವಣೆ ಪ್ರಕರಣ- ಕೆ.ಕವಿತಾ

ಪಿಟಿಐ
Published 26 ಮಾರ್ಚ್ 2024, 13:52 IST
Last Updated 26 ಮಾರ್ಚ್ 2024, 13:52 IST
ಕೆ. ಕವಿತಾ ಅವರನ್ನು ಮಂಗಳವಾರ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು –ಪಿಟಿಐ ಚಿತ್ರ
ಕೆ. ಕವಿತಾ ಅವರನ್ನು ಮಂಗಳವಾರ ನ್ಯಾಯಾಲಯದ ಎದುರು ಹಾಜರುಪಡಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣವು ‘ರಾಜಕೀಯ ಪಕ್ಷ ಬದಲಾವಣೆ ಪ್ರಕರಣ’ ಎಂದು ಬಿಆರ್‌ಎಸ್‌ ನಾಯಕಿ ಕೆ.ಕವಿತಾ ಮಂಗಳವಾರ ಹೇಳಿದರು.

ಕವಿತಾ ಅವರನ್ನು ಭಾರಿ ಭದ್ರತೆ ಮಧ್ಯೆ ದೆಹಲಿ ಕೋರ್ಟ್‌ ಎದುರು ಮಂಗಳವಾರ ಹಾಜರುಪಡಿಸಲಾಯಿತು.

ಈ ವೇಳೆ ಕೋರ್ಟ್‌ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇದು ಹಣ ಅಕ್ರಮ ವರ್ಗಾವಣೆ ಪ್ರಕರಣ ಅಲ್ಲ, ರಾಜಕೀಯ ಪಕ್ಷ ಬದಲಾವಣೆ ಪ್ರಕರಣ. ಒಬ್ಬ ಆರೋಪಿ ಈಗಾಗಲೇ ಬಿಜೆಪಿ ಸೇರಿದ್ದಾರೆ, ಎರಡನೇ ಆರೋಪಿ ಬಿಜೆಪಿ ಟಿಕೆಟ್ ಪಡೆದಿದ್ದಾರೆ. ಮೂರನೇ ಆರೋಪಿ ಚುನಾವಣಾ ಬಾಂಡ್‌ ಮೂಲಕ ₹50 ಕೋಟಿ ನೀಡಿದ್ದಾರೆ. ಇದೊಂದು ಸುಳ್ಳು ಪ್ರಕರಣ. ಕ್ಲೀನ್‌ಚಿಟ್‌ ಪಡೆದು ಇಲ್ಲಿಂದ ಹೊರಬರುತ್ತೇವೆ. ಜೈ ತೆಲಂಗಾಣ’ ಎಂದು ಹೇಳಿದರು.

ADVERTISEMENT

 ಕೋರ್ಟ್‌ ವಿಚಾರಣೆ ಬಳಿಕ  ಅವರಿಗೆ ನ್ಯಾಯಾಲಯದ ಒಳಗಡೆ  ಕುಟುಂಬ ಸದಸ್ಯರನ್ನು ಭೇಟಿಯಾಗಲು ಅವಕಾಶ ನೀಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.