ADVERTISEMENT

ಹಣ ಅಕ್ರಮ ವರ್ಗಾವಣೆ: ಚೆನ್ನೈನ ಹಲವೆಡೆ ಇ.ಡಿ ದಾಳಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2024, 13:50 IST
Last Updated 19 ಜನವರಿ 2024, 13:50 IST
<div class="paragraphs"><p>ಇ.ಡಿ</p></div>

ಇ.ಡಿ

   

ಚೆನ್ನೈ (ಪಿಟಿಐ): ಚೆನ್ನೈ ಮೂಲದ ನಿರ್ಮಾಣ ಮತ್ತು ಮೂಲಸೌಕರ್ಯ ಕಂಪನಿ, ಅದರ ಪ್ರವರ್ತಕರು ಮತ್ತು ಇತರರ ವಿರುದ್ಧದ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ, ಜಾರಿ ನಿರ್ದೇಶನಾಲಯ (ಇ.ಡಿ) ಚೆನ್ನೈನಲ್ಲಿ ಅನೇಕ ಕಡೆಗಳಲ್ಲಿ ಶುಕ್ರವಾರ ದಾಳಿ ನಡೆಸಿದೆ.  

‘ಓಶಿಯನ್ ಲೈಫ್‌ಸ್ಪೇಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್’, ಅದರ ಎಂ.ಡಿ ಮತ್ತು ಸಿಇಒ ಎಸ್‌.ಕೆ ಪೀಟರ್, ನಿರ್ದೇಶಕರು ಮತ್ತು ಇತರರ ವಿರುದ್ಧ ಗ್ರೇಟರ್ ಚೆನ್ನೈ ಪೊಲೀಸ್‌ನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇ.ಡಿ ತನಿಖೆ ನಡೆಸುತ್ತಿದೆ. 

ADVERTISEMENT

ಚೆನ್ನೈ ನಗರ ಮತ್ತು ಸುತ್ತಮುತ್ತಲಿನ 6–7 ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಕಂಪನಿ ವರ್ತಕರು ತಮಗೆ ವಂಚಿಸಿದ್ದಾರೆ ಎಂದು ದೂರಿ, ಕಂಪನಿಯ ಮಾಜಿ ನಿರ್ದೇಶಕ ಬಿ. ಶ್ರೀರಾಮ್ ದೂರು ನೀಡಿದ್ದರು. ತಮ್ಮನ್ನು ಕಂಪನಿಯಿಂದ ತೆಗೆದು ಹಾಕಿದ್ದನ್ನು ಪ್ರಶ್ನಿಸಿ ಅವರು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (ಎನ್‌ಸಿಎಲ್‌ಟಿ) ಮೊರೆ ಹೋಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.