
ಇ.ಡಿ
ನವದೆಹಲಿ: ದುಬೈನಲ್ಲಿ ಬಹಿರಂಗಪಡಿಸದ ಆಸ್ತಿಗಳನ್ನು ಹೊಂದಿರುವ ಭಾರತೀಯರ ವಿರುದ್ಧದ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯವು ಶುಕ್ರವಾರ ದೆಹಲಿ ಮತ್ತು ಗೋವಾದಲ್ಲಿನ ಹವಾಲ ಹಣದ ನಿರ್ವಾಹಕರ ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಫೆಮಾ) ಅಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದುಬೈನಲ್ಲಿ ಭಾರತೀಯರು ಹೊಂದಿರುವ ಬಹಿರಂಗಪಡಿಸದ ಆಸ್ತಿಗಳ ಕುರಿತು ಅಂಕಿಅಂಶವನ್ನು ಇ.ಡಿ ಸಿದ್ಧಪಡಿಸಿದೆ. ದುಬೈನಲ್ಲಿ ಅಕ್ರಮ ಆಸ್ತಿ ಮಾಡಿರುವ ಆರೋಪಗಳನ್ನು ಸಾಬೀತುಪಡಿಸಲು ಹೆಚ್ಚಿನ ಪುರಾವೆಗಳನ್ನು ಸಂಗ್ರಹಿಸುವ ಗುರಿಯನ್ನು ಈ ಶೋಧಗಳು ಹೊಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹವಾಲ ನಿರ್ವಾಹಕರು ದೇಶ ಮತ್ತು ವಿದೇಶಗಳಲ್ಲಿ ಅಕ್ರಮವಾಗಿ ಹಣವನ್ನು ಸಾಗಿಸುತ್ತಾರೆ. ಅಕ್ರಮ ಹೂಡಿಕೆಗೆ ನೆರವು ನೀಡುತ್ತಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.