ಪ್ರಾತಿನಿಧಿಕ ಚಿತ್ರ (ಸಂಗ್ರಹ ಚಿತ್ರ)
ನವದೆಹಲಿ: ಬೆಂಗಳೂರು ವಿಮಾನ ನಿಲ್ದಾಣದಿಂದ ಕೊಲಂಬೊಗೆ ಕಳ್ಳಸಾಗಣೆ ಮಾಡುತ್ತಿದ್ದ ₹2.12 ಕೋಟಿ ಮೌಲ್ಯದ ವಿದೇಶಿ ಕರೆನ್ಸಿಗಳನ್ನು ಶ್ರೀಲಂಕಾ ಪ್ರಜೆಯಿಂದ ವಶಪಡಿಸಿಕೊಂಡಿರುವುದಾಗಿ ಜಾರಿ ನಿರ್ದೇಶನಾಲಯ (ಇ.ಡಿ) ಬುಧವಾರ ತಿಳಿಸಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭದ್ರತಾ ತಪಾಸಣೆ ವೇಳೆ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ನೋಟುಗಳನ್ನು ಪತ್ತೆಹಚ್ಚಿ, ಕಳ್ಳಸಾಗಣೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದರು ಎಂದು ಕೇಂದ್ರೀಯ ತನಿಖಾ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಶ್ರೀಲಂಕಾ ಪ್ರಜೆ ವಿಮಲ್ರಾಜ್ ತುರೈಸಿಂಗಂ ಅವರಿಂದ ಡಾಲರ್, ಯೂರೊ ಮತ್ತು ರಿಯಾಲ್ ಕರೆನ್ಸಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವರ ಜೊತೆ ಥಿಲೀಪನ್ ಜಯಂತಿಕುಮಾರ್ ಎಂಬ ಮತ್ತೊಬ್ಬ ಶ್ರೀಲಂಕಾದ ವ್ಯಕ್ತಿ ಮತ್ತು ಭಾರತೀಯ ವೀರ ಕುಮಾರ್ ಇದ್ದರು. ಈ ಮೂವರು ಪ್ರಯಾಣಿಕರು ಶ್ರೀಲಂಕಾ ಏರ್‌ಲೈನ್ಸ್ ವಿಮಾನದ ಮೂಲಕ ಕೊಲಂಬೊ ತಲುಪಲು ಪ್ರಯತ್ನಿಸುತ್ತಿದ್ದರು. ತುರೈಸಿಂಗಂ ಈ ಕರೆನ್ಸಿಗಳನ್ನು ಚೆನ್ನೈನಲ್ಲಿ ನಗದು ಪಾವತಿಸಿ ಖರೀದಿಸಿರುವುದು ಗೊತ್ತಾಗಿದೆ ಎಂದು ಇಡಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.