ADVERTISEMENT

8 ನಕ್ಸಲರು ತೆಲಂಗಾಣ ಪೊಲೀಸರಿಗೆ ಶರಣು

ಪಿಟಿಐ
Published 31 ಮೇ 2025, 16:35 IST
Last Updated 31 ಮೇ 2025, 16:35 IST
---
---   

ಹೈದರಾಬಾದ್: ಸಿಪಿಐ (ಮಾವೋವಾದಿ) ಸಂಘಟನೆಯ ಎಂಟು ಸದಸ್ಯರು ತೆಲಂಗಾಣದ ಮುಲುಗು ಜಿಲ್ಲೆಯ ಪೊಲೀಸರಿಗೆ ಶನಿವಾರ ಶರಣಾಗಿದ್ದಾರೆ. 

ಮಹಾರಾಷ್ಟ್ರ ಮತ್ತು ಛತ್ತೀಸಗಢದ ವಿಭಾಗೀಯ ಸಮಿತಿಯ ಒಬ್ಬ ಸದಸ್ಯ, ಪ್ರದೇಶ ಸಮಿತಿಯ ಇಬ್ಬರು ಸದಸ್ಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ, ಶರಣಾಗಿದ್ದಾರೆ ಎಂದು ಮುಲುಗು ಜಿಲ್ಲೆಯ ಎಸ್‌ಪಿ ಶಬರೀಷ್ ತಿಳಿಸಿದ್ದಾರೆ. 

ಈ ಮೂಲಕ ಈ ವರ್ಷದ ಜನವರಿಯಿಂದ ಈವರೆಗೆ ಮುಲುಗು ಜಿಲ್ಲೆಯ 68 ಮಂದಿ ಸೇರಿದಂತೆ ಒಟ್ಟಾರೆ 355 ನಕ್ಸಲರು ತೆಲಂಗಾಣ ಪೊಲೀಸರ ಮುಂದೆ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. 

ADVERTISEMENT

ತೆಲಂಗಾಣ ಸರ್ಕಾರ ನೀಡಲಿರುವ ಕಲ್ಯಾಣ ಕ್ರಮಗಳಿಂದಾಗಿ ಹಲವರು ಮಾವೋವಾದಿ ಸಿದ್ಧಾಂತವನ್ನು ತ್ಯಜಿಸಿ, ತಮ್ಮ ಕುಟುಂಬಗಳ ಸದಸ್ಯರೊಂದಿಗೆ ಸುಖ ಸಂಸಾರ ಸಾಗಿಸಲು ಪೊಲೀಸರಿಗೆ ಶರಣಾಗುತ್ತಿದ್ದಾರೆ ಎಂದು ಪೊಲೀಸರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.