ADVERTISEMENT

ಲೋಕಸಭಾ ಚುನಾವಣೆ ಫಲಿತಾಂಶ: ಮತ ಎಣಿಕೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಮೇ 2019, 2:33 IST
Last Updated 23 ಮೇ 2019, 2:33 IST
   

ನವದೆಹಲಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳು ಸೇರಿದಂತೆ ದೇಶದ 542 ಲೋಕಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಯಿತು.

ಜಿಲ್ಲೆಗಳಚುನಾವಣಾಧಿಕಾರಿಗಳು ಸ್ಟ್ರಾಂಗ್‌ ರೂಂ ಅನ್ನು ತೆರೆದು ಮತ ಎಣಿಗೆ ಅನುವು ಮಾಡಿಕೊಟ್ಟರು. ಮೊದಲಿಗೆ ಅಂಚೆ ಮತಗಳ ಎಣಿಕೆಯನ್ನು ಆರಂಭಿಸಲಾಯಿತು. ನಂತರಸಿಬ್ಬಂದಿಗಳುಮತಯಂತ್ರಗಳನ್ನು ತೆಗೆದುಕೊಂಡು ಎಣಿಕೆ ಕಾರ್ಯವನ್ನು ಆರಂಭಿಸಿದರು.

ಮತ ಎಣಿಕೆ ಕೇಂದ್ರಗಳ ಸುತ್ತ ಪೊಲೀಸ್‌ ಬಂದೋ ಬಸ್ತ್‌ ಮಾಡಲಾಗಿದೆ.ಮೊಬೈಲ್‌ ಫೋನ್‌, ಐ–ಪಾಡ್‌, ಲ್ಯಾಪ್‌ಟಾಪ್‌ ಸೇರಿದಂತೆ ಯಾವುದೇ ರೀತಿಯ ಎಲೆಕ್ಟ್ರಾನಿಕ್‌ ಸಾಧನಗಳನ್ನು ಒಯ್ಯುವಂತಿಲ್ಲ. ಚುನಾವಣಾ ಆಯೋಗದ ವೀಕ್ಷಕರು, ಚುನಾವಣಾಧಿಕಾರಿಗಳಿಗೆ ಮಾತ್ರ ಚುನಾವಣಾ ಉದ್ದೇಶಕ್ಕಾಗಿ ಮಾತ್ರ ಮೊಬೈಲ್‌, ಕಂಪ್ಯೂಟರ್‌, ಲ್ಯಾಪ್‌ಟಾಪ್‌ ಒಯ್ಯಲು ಅವಕಾಶವಿದೆ.

ADVERTISEMENT

ಲೋಕಸಭೆಯಲ್ಲಿ ಒಟ್ಟು 543ಕ್ಷೇತ್ರಗಳಿವೆ. ಆದರೆ, ಈ ಬಾರಿ 542ಕ್ಷೇತ್ರಗಳಿಗೆ ಮಾತ್ರ ಮತದಾನ ನಡೆದಿದೆ.ಅತಿಯಾದ ಹಣ ಬಳಕೆಯಾಗಿದೆ ಎಂಬ ಕಾರಣಕ್ಕೆ ತಮಿಳುನಾಡಿನ ವೆಲ್ಲೂರು ಕ್ಷೇತ್ರದ ಮತದಾನವನ್ನು ಆಯೋಗವು ರದ್ದು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.