ನವದೆಹಲಿ: ರಾಜ್ಯಸಭೆಯ 18 ಸ್ಥಾನಗಳಿಗೆ ಬಾಕಿ ಇರುವ ಚುನಾವಣೆಯನ್ನು ಜೂನ್ 19ರಂದು ನಡೆಸುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಈ ಹಿಂದೆ ಮಾರ್ಚ್ 26ರಂದು ಚುನಾವಣೆ ನಿಗದಿಯಾಗಿತ್ತು. ಆದರೆ, ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಮುಂದೂಡಿಕೆಯಾಗಿತ್ತು.
‘ಆಂಧ್ರ ಪ್ರದೇಶ (4), ಗುಜರಾತ್ (4), ಜಾರ್ಖಂಡ್ (2), ಮಧ್ಯ ಪ್ರದೇಶ (3), ಮಣಿಪುರ (1), ಮೇಘಾಲಯ (1) ಹಾಗೂ ರಾಜಸ್ಥಾನದಿಂದ (3) ತೆರವಾಗಿರುವ ಸ್ಥಾನಗಳಿಗೆ ಮತದಾನ ಮತ್ತು ಮತ ಎಣಿಕೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಆಯೋಗವು ಪ್ರಕಟಣೆಯಲ್ಲಿ ತಿಳಿಸಿದೆ.
ಚುನಾವಣೆಯ ದಿನವೇ ಸಂಜೆ 5 ಗಂಟೆಗೆ ಮತ ಎಣಿಕೆಯೂ ನಡೆಯಲಿದೆ ಎಂದು ಆಯೋಗ ಹೇಳಿದೆ.
ಇದನ್ನೂ ಓದಿ:ರಾಜ್ಯಸಭೆಗೆ ದೇವೇಗೌಡ: ಸುಲಭದ ತುತ್ತಲ್ಲ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.