ADVERTISEMENT

Video- ಮಾವುತನ ಕೂರಿಸಿಕೊಂಡು ಗಂಗಾ ನದಿಯಲ್ಲಿ 3 ಕಿಲೋಮೀಟರ್ ಸ್ವಿಮ್ ಮಾಡಿದ ಆನೆ!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಜುಲೈ 2022, 10:06 IST
Last Updated 13 ಜುಲೈ 2022, 10:06 IST
ಮಾವುತನನ್ನು ಕೂರಿಸಿಕೊಂಡು ಆನೆಯೊಂದು ತುಂಬಿದ ಗಂಗಾ ನದಿಯಲ್ಲಿ ಬರೋಬ್ಬರಿ 3 ಕಿಲೋಮಿಟರ್ ಈಜಿರುವ ಘಟನೆ ನಡೆದಿದೆ.
ಮಾವುತನನ್ನು ಕೂರಿಸಿಕೊಂಡು ಆನೆಯೊಂದು ತುಂಬಿದ ಗಂಗಾ ನದಿಯಲ್ಲಿ ಬರೋಬ್ಬರಿ 3 ಕಿಲೋಮಿಟರ್ ಈಜಿರುವ ಘಟನೆ ನಡೆದಿದೆ.   

ಪಾಟ್ನಾ: ಮಾವುತನನ್ನು ಕೂರಿಸಿಕೊಂಡು ಆನೆಯೊಂದು ತುಂಬಿದ ಗಂಗಾ ನದಿಯಲ್ಲಿ ಬರೋಬ್ಬರಿ 3 ಕಿಲೋಮಿಟರ್ ಈಜಿರುವ ಘಟನೆ ಬಿಹಾರದಲ್ಲಿ ನಡೆದಿದೆ.

ಘಟನೆಗೆ ಸಂಬಂಧಿಸಿದ ವಿಡಿಯೊ ಒಂದು ವೈರಲ್ ಆಗಿದೆ. ಈ ವಿಡಿಯೊವನ್ನು ಪತ್ರಕರ್ತ ಉತ್ಕರ್ಷ ಸಿಂಗ್ ಎನ್ನುವವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ಗಮನ ಸೆಳೆದಿದೆ.

ಆನೆಯೊಂದು ಬಿಹಾರದ ರಾಘವಪುರ ಪ್ರದೇಶದಿಂದಪಟ್ನಾದವರೆಗೆ ಗಂಗಾ ನದಿಯಲ್ಲಿ ಮಾವುತನನ್ನು ಕೂರಿಸಿಕೊಂಡುಮೂರು ಕಿಲೋಮಿಟರ್ ಈಜಿಕೊಂಡು ದಡ ಸೇರಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಆನೆಗಳು ಸಹಜವಾಗಿ ಆಳ ನೀರಿಗೆ ಹೋಗುವುದಿಲ್ಲ. ಒಂದು ವೇಳೆ ಹೋದರೂ ಯಶಸ್ವಿಯಾಗಿ ಈಜಲು ಸಮರ್ಥವಾಗಿರುತ್ತವೆ. ಆದರೆ ದೂರದವರೆಗೆ ಈಜುವುದೂ ತುಂಬಾ ವಿರಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.