ADVERTISEMENT

11 ನಕ್ಸಲರು ಶರಣಾಗತಿ, 2026ರ ಮಾರ್ಚ್‌ಗೆ ಮಹಾರಾಷ್ಟ್ರ ನಕ್ಸಲ್ ಮುಕ್ತ: ಡಿಜಿಪಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2025, 13:40 IST
Last Updated 10 ಡಿಸೆಂಬರ್ 2025, 13:40 IST
<div class="paragraphs"><p>ಪೊಲೀಸರ ಮುಂದೆ ಶರಣಾದ ನಕ್ಸಲರು</p></div>

ಪೊಲೀಸರ ಮುಂದೆ ಶರಣಾದ ನಕ್ಸಲರು

   

ಪ್ರಜಾವಾಣಿ ಚಿತ್ರ

ಗಡಿಚಿರೋಲಿ: ಮಹಾರಾಷ್ಟ್ರದ ಗಡಿಚಿರೋಲಿಯಲ್ಲಿ 11 ಹಿರಿಯ ನಕ್ಸಲರು ಪೊಲೀಸರಿಗೆ ಬುಧವಾರ ಶರಣಾಗಿದ್ದಾರೆ.

ADVERTISEMENT

ಇವರನ್ನು ಹುಡುಕಿಕೊಟ್ಟವರಿಗೆ ಒಟ್ಟು ₹82 ಲಕ್ಷ ಬಹುಮಾನ ಈ ಹಿಂದೆ ಘೋಷಣೆಯಾಗಿತ್ತು.

‘ನಕ್ಸಲ್ ಚಟುವಟಿಕೆ ಅವನತಿಯ ಹಂತಕ್ಕೆ ತಲುಪಿದೆ. ಗಡಿಚಿರೋಲಿಯಲ್ಲಿ 10ರಿಂದ 11 ನಕ್ಸಲರಷ್ಟೆ ಸಕ್ರಿಯರಾಗಿರಬಹುದು. 2026ರ ಮಾರ್ಚ್‌ 31ರೊಳಗೆ ಮಹಾರಾಷ್ಟ್ರವನ್ನು ನಕ್ಸಲ್ ಮುಕ್ತಗೊಳಿಸುವ ಗುರಿಯನ್ನು ತಲುಪಲಿದ್ದೇವೆ’ ಎಂದು ಡಿಜಿಪಿ ರಶ್ಮಿ ಶುಕ್ಲಾ ತಿಳಿಸಿದರು.

‘ಗಡಿಚಿರೋಲಿಯಲ್ಲಿ ಈ ವರ್ಷ 100ಕ್ಕೂ ಅಧಿಕ ನಕ್ಸಲರು ಶರಣಾಗಿದ್ದಾರೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.