ನವದೆಹಲಿ: ಭಾರತದ ನೌಕಾಪಡೆಯ ಜತೆಗೆ ಈ ವರ್ಷ ಜಂಟಿ ಸಮರಾeಭ್ಯಾಸ ನಡೆಸುವ ಪ್ರಸ್ತಾವವನ್ನು ಸಲ್ಲಿಸಲಾಗಿದೆ ಎಂದು ಐರೋಪ್ಯ ಒಕ್ಕೂಟದ (ಇಯು) ನೌಕಾಪಡೆಯ ವೈಸ್ ಅಡ್ಮಿರಲ್ ಇಗ್ನೇಸಿಯೊ ವಿಲ್ಲಾನುಯೆವಾ ಸೆರಾನೊ ಗುರುವಾರ ಹೇಳಿದರು.
‘ಭಾರತದ ವ್ಯಾಪ್ತಿಯ ಸಾಗರ ಪ್ರದೇಶದಲ್ಲಿ ಅಲ್ಲಿನ ನೌಕಾಪಡೆ ಪ್ರಮುಖವಾಗಿ ಕಾರ್ಯನಿರ್ವಹಿಸುತ್ತಿದೆ. ಸಾಗರ ಪ್ರದೇಶದ ಸುರಕ್ಷತೆಗೆ ಒತ್ತು ನೀಡಿ, ಅಗತ್ಯ ಭದ್ರತೆ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಭಾರತದ ಜತೆಗೆ ಇಯು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
‘ಮೇ ಅಂತ್ಯದೊಳಗೆ ಜಂಟಿ ಸಮರಾಭ್ಯಾಸ ನಡೆಸುವ ಪ್ರಸ್ತಾವವನ್ನು ಭಾರತ ನೌಕಾಪಡೆಯ ಅಧಿಕಾರಿಗಳ ಮುಂದೆ ಇಟ್ಟಿದ್ದೇವೆ. ಅದಕ್ಕೆ ಒಪ್ಪಿಗೆ ದೊರೆತರೆ ಸಮರಾಭ್ಯಾಸಕ್ಕಾಗಿ ಎರಡು ಹಡಗುಗಳನ್ನು ಕಳುಹಿಸಲಾಗುವುದು. ಇದರಿಂದ ಭಾರತದ ನೌಕಾಪಡೆ ಜತೆಗೆ ಸಂಪರ್ಕ ಮತ್ತು ಸಮನ್ವಯ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.