ADVERTISEMENT

ಕಸಬ್‌ಗೂ ಇಷ್ಟೊಂದು ಭದ್ರತೆ ಇರಲಿಲ್ಲ: ಆದಿತ್ಯ ಠಾಕ್ರೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 13:24 IST
Last Updated 3 ಜುಲೈ 2022, 13:24 IST

ಮುಂಬೈ (ಪಿಟಿಐ):ಏಕನಾಥ್ ಶಿಂಧೆ ನೇತೃತ್ವದ ಸರ್ಕಾರದ ಬಂಡಾಯ ಶಿವಸೇನಾ ಶಾಸಕರಿಗೆ ಬಿಗಿ ಪೊಲೀಸ್‌ ಭದ್ರತೆ ಒದಗಿಸಿರುವುದನ್ನು ಶಿವಸೇನಾ ನಾಯಕ ಆದಿತ್ಯ ಠಾಕ್ರೆ ಟೀಕಿಸಿದ್ದಾರೆ.

ಬಿಗಿ ಭದ್ರತೆಯಲ್ಲಿ ಐಷರಾಮಿ ಹೋಟೆಲ್‌ನಿಂದ ಬಸ್‌ನಲ್ಲಿ ವಿಧಾನ ಭವನ ಆವರಣ ಪ್ರವೇಶಿಸಿದ ಶಿವ ಸೇನಾ ಶಾಸಕರನ್ನು ಉದ್ದೇಶಿಸಿ ಮಾತನಾಡಿದ ಆದಿತ್ಯ, ’ಕಸಬ್‌ಗೂ ಇಷ್ಟೊಂದು ಭದ್ರತೆ ಇರಲಿಲ್ಲ. ಈ ರೀತಿ ಭದ್ರತೆ ಮುಂಬೈನಲ್ಲಿ ನಾವು ನೋಡಿರಲಿಲ್ಲ. ಯಾಕೆ ಹೆದರುತ್ತೀರಾ? ಯಾರಾದರೂ ಓಡಿ ಹೋಗುತ್ತಾರೆಯೇ? ಯಾಕಿಷ್ಟು ಭಯ?‘ ಎಂದು ಪ್ರಶ್ನಿಸಿದರು.

2008ರಲ್ಲಿ ಮುಂಬೈ ದಾಳಿ ವೇಳೆ ಸೆರೆಸಿಕ್ಕ ಪಾಕಿಸ್ತಾನದ ಭಯೋತ್ಪಾದಕ ಅಜ್ಮಲ್‌ ಕಸಬ್‌ನಿಗೆ ಯರವಾಡ ಕೇಂದ್ರ ಕಾರಾಗೃಹದಲ್ಲಿ ಮರಣ ದಂಡನೆ ವಿಧಿಸಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.