ADVERTISEMENT

ಎಲ್ಲ ಮಾತುಗಳು ದ್ವೇಷ ಭಾಷಣವಲ್ಲ: ಸುಪ್ರೀಂ ಕೋರ್ಟ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2023, 19:30 IST
Last Updated 20 ಫೆಬ್ರುವರಿ 2023, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ‘ಮಾತನಾಡಿದ ಎಲ್ಲವೂ ದ್ವೇಷ ಭಾಷಣ ಎಂದು ಪರಿಗಣಿಸಲಾಗದು’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ದ್ವೇಷ ಭಾಷಣವನ್ನು ಕುರಿತ ವಿವಿಧ ಅರ್ಜಿಗಳ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌, ಬಿ.ವಿ.ನಾಗರತ್ನ ಅವರಿದ್ದ ಪೀಠ ಈ ಮಾತು ಹೇಳಿತು.

‘ನಮಗೆ ದ್ವೇಷ ಎಂಬುದು ಸಾಮಾನ್ಯ ವೈರಿ. ಅದಷ್ಟೇ ನಿಜ. ನಿಮ್ಮ ಮನಸ್ಸುಗಳಿಂದ ಮೊದಲು ದ್ವೇಷವನ್ನು ತೆಗೆಯಿರಿ. ಅ ನಂತರ ಬದಲಾವಣೆಯನ್ನು ಗಮನಿಸಿ’ ಎಂದು ಪೀಠ ಹೇಳಿತು.

ಮುಂಬೈನಲ್ಲಿ ನಡೆದಿದ್ದ ಸಕಾಳ್‌ ಹಿಂದೂ ಸಮಾಜ್‌ ರ‍್ಯಾಲಿಯಲ್ಲಿ ದ್ವೇಷ ಭಾಷಣ ಮಾಡಲಾಗಿದೆ ಎಂದು ಕೇರಳದ ನಿವಾಸಿ ಶಹೀನ್‌ ಅಬ್ದುಲ್ಲಾ ಅವರು ಸಲ್ಲಿಸಿದ್ದರು. ಆದರೆ, ಅಲ್ಲಿ ದ್ವೇಷ ಭಾಷಣ ಮಾಡಲಾಗಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.