ADVERTISEMENT

ಚೀನಾ ರಾಯಭಾರ ಕಚೇರಿ ಎದುರು ಮಾಜಿ ಸೈನಿಕರ ಪ್ರತಿಭಟನೆ

ಪಿಟಿಐ
Published 17 ಜೂನ್ 2020, 11:44 IST
Last Updated 17 ಜೂನ್ 2020, 11:44 IST
ಚೀನಾ ರಾಯಭಾರ ಕಚೇರಿ ಸಮೀಪ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಚೀನಾ ವಿರುದ್ಧ ಘೋಷಣೆ ಕೂಗಿದರು  –ಎಎಫ್‌ಪಿ ಚಿತ್ರ 
ಚೀನಾ ರಾಯಭಾರ ಕಚೇರಿ ಸಮೀಪ ಪ್ರತಿಭಟನೆ ನಡೆಸಿದ ಪ್ರತಿಭಟನಕಾರರು ಚೀನಾ ವಿರುದ್ಧ ಘೋಷಣೆ ಕೂಗಿದರು  –ಎಎಫ್‌ಪಿ ಚಿತ್ರ    

ನವದೆಹಲಿ: ಗಡಿಯಲ್ಲಿ ನಡೆದ ಸಂಘರ್ಷದಲ್ಲಿ ಭಾರತದ ಸೈನಿಕರನ್ನು ಚೀನಾ ಹತ್ಯೆ ಮಾಡಿರುವುದನ್ನು ಖಂಡಿಸಿ ಇಲ್ಲಿನ ಚೀನಾ ರಾಯಭಾರ ಕಚೇರಿ ಎದುರು ಬುಧವಾರ ಮಾಜಿ ಸೈನಿಕರ ಗುಂಪೊಂದು ಪ್ರತಿಭಟನೆ ನಡೆಸಿತು.

‘ಹುತಾತ್ಮರ ಕ್ಷೇಮಾಭಿವೃದ್ಧಿ ಒಕ್ಕೂಟ’ದ ಹೆಸರಿನಡಿ ಆರೇಳು ಮಾಜಿ ಯೋಧರಿದ್ದ ಗುಂಪು ಪ್ರತಿಭಟನೆ ನಡೆಸಿತು. ‘ರಾಯಭಾರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಬಾರದು ಎಂದು ಮನವಿ ಮಾಡಿದ ಸಂದರ್ಭದಲ್ಲಿ ಮಾಜಿ ಸೈನಿಕರು ಸ್ಥಳದಿಂದ ತೆರಳಿದರು’ ಎಂದುಹೆಚ್ಚುವರಿ ಉಪಪೊಲೀಸ್‌ ಆಯುಕ್ತ ದೀಪಕ್‌ ಯಾದವ್ ತಿಳಿಸಿದರು.

ಬಂಧನ: ಚೀನಾ ದಾಳಿ ಖಂಡಿಸಿ ತೀನ್‌ ಮೂರ್ತಿ ವೃತ್ತದಲ್ಲಿ ಸ್ವದೇಶಿ ಜಾಗರಣ್‌ ಮಂಚ್‌ನ 10 ಸದಸ್ಯರಿದ್ದ ಗುಂಪು ಪ್ರತಿಭಟನೆ ನಡೆಸಿತು. ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.