ADVERTISEMENT

ಗೋವಾ ಸುರಕ್ಷಾ ಮಂಚ್‌ಗೆ ಸೇರಿದ ಆರ್‌ಎಸ್‌ಎಸ್‌ನ ಸುಭಾಷ್‌ ವೆಲಿಂಗ್‌ಕರ್

ಪಿಟಿಐ
Published 18 ನವೆಂಬರ್ 2018, 12:44 IST
Last Updated 18 ನವೆಂಬರ್ 2018, 12:44 IST
   

ಪಣಜಿ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್‌) ಗೋವಾ ಘಟಕದ ಮಾಜಿ ಅಧ್ಯಕ್ಷ ಸುಭಾಷ್‌ ವೆಲಿಂಗ್‌ಕರ್‌ ಅವರು ಭಾನುವಾರ ಅಧಿಕೃತವಾಗಿ ಗೋವಾ ಸುರಕ್ಷಾ ಮಂಚ್‌ಗೆ (ಜಿಎಸ್‌ಎಂ) ಸೇರ್ಪಡೆಯಾಗಿ, ಪಕ್ಷದ ನೇತೃತ್ವ ವಹಿಸಿಕೊಂಡಿದ್ದಾರೆ.

ಬಳಿಕ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಗೋವಾದಲ್ಲಿ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆಯಿದೆ ಎಂದರು.

ಪ್ರಾಥಮಿಕ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯಲ್ಲೇ ಕಲಿಸಲು ಉತ್ತೇಜನ ನೀಡಬೇಕು ಎಂದು ಒತ್ತಾಯಿಸಿದ್ದ ವೆಲಿಂಗ್‌ಕರ್, ಆಂಗ್ಲಮಾಧ್ಯಮ ಶಾಲೆಗಳಿಗೆ ಅನುದಾನ ನೀಡುವುದನ್ನು ಪ್ರಬಲವಾಗಿ ವಿರೋಧಿಸಿದ್ದರು.

ADVERTISEMENT

ಈ ವಿಚಾರದಲ್ಲಿ ರಾಜ್ಯ ಬಿಜೆಪಿ ಸರ್ಕಾರದ ಜೊತೆಗೆ ಭಿನ್ನಮತ ಕಾಣಿಸಿಕೊಂಡ ಕಾರಣ, 2016ರಲ್ಲಿ ಜಿಎಸ್‌ಎಂ ಪಕ್ಷವನ್ನು ಸ್ಥಾಪಿಸಿದ್ದರು.

2017ರ ವಿಧಾನಸಭಾ ಚುನಾವಣೆಯಲ್ಲಿ ಮಹಾರಾಷ್ಟ್ರ ಗೋಮಾಂತಕ್‌ ಪಕ್ಷ, ಶಿವಸೇನೆ ಜೊತೆ ಮೈತ್ರಿಮಾಡಿಕೊಂಡು ಜಿಎಸ್‌ಎಂನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿತ್ತು, ಆದರೆ ಪಕ್ಷ ಖಾತೆ ತೆರೆಯಲು ವಿಫಲವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.