ADVERTISEMENT

ಜೆಡಿಯು ಮಾಜಿ ಅಧ್ಯಕ್ಷ ಆರ್‌.ಸಿ.ಪಿ. ಸಿಂಗ್ ಬಿಜೆಪಿ ಸೇರ್ಪಡೆ

ಪಿಟಿಐ
Published 11 ಮೇ 2023, 12:43 IST
Last Updated 11 ಮೇ 2023, 12:43 IST
ಬಿಜೆಪಿ ಸೇರಿದ ಆರ್‌.ಸಿ.ಪಿ. ಸಿಂಗ್‌
ಬಿಜೆಪಿ ಸೇರಿದ ಆರ್‌.ಸಿ.ಪಿ. ಸಿಂಗ್‌   ಟ್ವಿಟರ್‌ ಚಿತ್ರ: @dpradhanbjp

ನವದೆಹಲಿ: ಜೆಡಿಯು ಮಾಜಿ ಅಧ್ಯಕ್ಷ ಆರ್‌.ಸಿ.ಪಿ.ಸಿಂಗ್‌ ಅವರು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್‌ ಅವರ ಉಪಸ್ಥಿತಿಯಲ್ಲಿ ಗುರುವಾರ ಇಲ್ಲಿ ಬಿಜೆಪಿ ಸೇರ್ಪಡೆಯಾದರು. 

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಅತ್ಯಾಪ್ತ ಎಂದೇ ಗುರುತಿಸಿಕೊಂಡಿದ್ದ ಆರ್‌ಪಿಸಿ ಸಿಂಗ್‌ ಅವರು ಕಳೆದ ವರ್ಷ ನಿತೀಶ್ ಅವರಿಂದ ದೂರವಾಗಿದ್ದರು.

‘ಕುರ್ಚಿ ಮೇಲಿನ ಪ್ರೀತಿಗಾಗಿ ನಿತೀಶ್‌ ಅವರು ಅಪರಾಧ ಮತ್ತು ಭ್ರಷ್ಟಾಚಾರದಲ್ಲಿ ತಾವು ಹೊಂದಿದ್ದ ನಿಲುವಿನ ಜೊತೆ ರಾಜಿ ಮಾಡಿಕೊಂಡಿದ್ದಾರೆ’ ಅವರು ಅವರು ಆರೋಪಿಸಿದರು. ಜೊತೆಗೆ ಮೋದಿ ಅವರ ನಾಯಕತ್ವವನ್ನು ಹೊಗಳಿದರು. 

ADVERTISEMENT

ನಿತೇಶ್‌ ಅವರನ್ನು ‘ಪತ್ಲಿ ಮಾರ್‌’ (ಸದಾ ರಾಜಕೀಯ ನಿರ್ಧಾರ ಬದಲಿಸುವ ವ್ಯಕ್ತಿ) ಎಂದು ಕರೆದಿರುವ ಅವರು ‘ನಿತೀಶ್‌ ಸದಾ ಪಿಎಂ (ಪತ್ಲಿ ಮಾರ್‌) ಆಗಿಯೇ ಇರುತ್ತಾರೆ’ ಎಂದರು.

ದೇಶದಲ್ಲಿ ಅಭಿವೃದ್ಧಿ ಕೆಲಸಗಳೇ ನಡೆಯುತ್ತಿಲ್ಲವೆಂದರೆ ದೇಶವು ಜಗತ್ತಿನಲ್ಲಿ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಹೇಗೆ ಹೊರಹೊಮ್ಮುತ್ತಿತ್ತು ಎಂದು ಅವರು ಪ್ರಶ್ನಿಸಿದರು. 

ಸಿಂಗ್‌ ಅವರನ್ನು ಈ ವೇಳೆ ಶ್ಲಾಘಿಸಿದ ಪ್ರಧಾನ್‌, ‘ಬಿಹಾರದಲ್ಲಿ ಜೆಡಿಯು ಬಲಪಡಿಸಲು ಬಹುವಾಗಿ ಶ್ರಮಿಸಿದ ಸಿಂಗ್‌ ಅವರು ಅತ್ಯಂತ ಹಿಂದುಳಿದ ಸಮುದಾಯಗಳ ವಿಶ್ವಾಸಕ್ಕೆ ಪಾತ್ರರಾಗಿರುವ ನಾಯಕ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.