ADVERTISEMENT

 ಹಣ ಅಕ್ರಮ ವರ್ಗಾವಣೆ: ಜಾರ್ಖಂಡ್‌ನ ಮಾಜಿ ಸಚಿವನಿಗೆ 7 ವರ್ಷ ಜೈಲು

ಪಿಟಿಐ
Published 23 ಏಪ್ರಿಲ್ 2020, 10:48 IST
Last Updated 23 ಏಪ್ರಿಲ್ 2020, 10:48 IST
   

ನವದೆಹಲಿ/ರಾಂಚಿ: ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರ್ಖಂಡ್‌ನ ಮಾಜಿ ಸಚಿವ ಅನೋಶ್‌ ಎಕ್ಕಾ ಅವರಿಗೆ ಏಳು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ₹ 2 ಕೋಟಿ ದಂಡ ವಿಧಿಸಿ ರಾಂಚಿ ನ್ಯಾಯಾಲಯ ತೀರ್ಪು ನೀಡಿದೆ.

ಪಿಎಂಎಲ್‌ಎ ವಿಶೇಷ ನ್ಯಾಯಾಧೀಶ ಅನಿಲ್ ಕುಮಾರ್ ಮಿಶ್ರಾ ಅವರು ಶಿಕ್ಷೆಯ ಪ್ರಮಾಣವನ್ನು ಘೋಷಿಸಿದರು. ಪ್ರಕರಣದಲ್ಲಿ ಅನೋಶ್‌ ಎಕ್ಕಾ ದೋಷಿ ಎಂದು ಕಳೆದ ಮಾರ್ಚ್‌ 21 ರಂದು ಜಾರ್ಖಂಡ್ ಕೋರ್ಟ್‌ ಹೇಳಿತ್ತು.

ಮಾಜಿ ಮುಖ್ಯಮಂತ್ರಿ ಮಧು ಕೋಡಾ ಹಾಗೂ ಇತರರ ವಿರುದ್ಧ ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಎಕ್ಕಾ ಸಹ ಆರೋಪಿಯಾಗಿದ್ದರು.

ADVERTISEMENT

ಕೋಡಾ ಸಂಪುಟದಲ್ಲಿ ಎಕ್ಕಾ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದರು. ಹಗರಣದ ತನಿಖೆ ಆರಂಭಿಸಿದ ಜಾರಿ ನಿರ್ದೇಶನಾಲಯ (ಇ.ಡಿ), ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.