ADVERTISEMENT

₹ 9.72 ಕೋಟಿ ವಂಚಿಸಿದ ಆರೋಪದ ಮೇಲೆ ಸುದ್ದಿ ವಾಹಿನಿ ಮಾಜಿ ಮುಖ್ಯಸ್ಥನ ಬಂಧನ

ಪಿಟಿಐ
Published 19 ಸೆಪ್ಟೆಂಬರ್ 2020, 11:50 IST
Last Updated 19 ಸೆಪ್ಟೆಂಬರ್ 2020, 11:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಲಖನೌ: ಉತ್ತರ ಪ್ರದೇಶದಟಿ.ವಿ. ಸುದ್ದಿ ವಾಹಿನಿಯೊಂದರ ಮಾಜಿ ಮುಖ್ಯಸ್ಥರೊಬ್ಬರನ್ನು ₹ 9.72 ಕೋಟಿ ರೂಪಾಯಿ ವಂಚನೆ ಆರೋಪದ ಮೇಲೆ ವಿಶೇಷ ಕಾರ್ಯಪಡೆಯ ಪೊಲೀಸರು ಬಂಧಿಸಿದ್ದಾರೆ.

ಲಖನೌ ಹೊರವಲಯದ ಅಯೋಧ್ಯೆ ರಸ್ತೆಯಲ್ಲಿ ಎಸ್‌ಟಿಎಫ್ ಸಿಬ್ಬಂದಿಯು ಆರೋಪಿ ಸಂತೋಷ್ ಮಿಶ್ರಾ ಎಂಬುವರನ್ನು ಬಂಧಿಸಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ಇತರೆ 9 ಜನರನ್ನು ಬಂಧಿಸಲಾಗಿದೆ. ಕೆಲವರಿಗೆ ₹ 9.72 ಕೋಟಿ ವಂಚಿಸಿರುವ ಆರೋಪ ಇವರ ಮೇಲಿದೆ ಎಂದು ಎಸ್‌ಟಿಎಫ್ ಹೇಳಿಕೆಯಲ್ಲಿ ತಿಳಿಸಿದೆ.

ಬಂಧಿತ ಸಂತೋಷ್ ಅವರು ‘ನ್ಯೂ ವರ್ಲ್ಡ್ ಇಂಡಿಯಾ’ ನ್ಯೂಸ್ ಚಾನಲ್‌ನ (ಉತ್ತರ ಪ್ರದೇಶ) ಮಾಜಿ ಮುಖ್ಯಸ್ಥ. ತಲೆಮರೆಸಿಕೊಳ್ಳುವ ಯತ್ನದಲ್ಲಿದ್ದಾಗ ಬಂಧಿಸಲಾಗಿದೆ. ಇವರ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯನ್ವಯ ಮೊಕದ್ದಮೆ ದಾಖಲಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.