ADVERTISEMENT

ನೌಕರರಿಗೆ ಪಾವತಿಸಿದ ಹೆಚ್ಚುವರಿ ವೇತನ ಹಿಂಪಡೆಯಲು ಸಾಧ್ಯವಿಲ್ಲ– ಸುಪ್ರೀಂ ಕೋರ್ಟ್

ಪಿಟಿಐ
Published 2 ಮೇ 2022, 15:45 IST
Last Updated 2 ಮೇ 2022, 15:45 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಲೆಕ್ಕಪತ್ರ ದೋಷದಿಂದ ನೌಕರನೊಬ್ಬರಿಗೆ ಹೆಚ್ಚುವರಿ ಸಂಬಳ ನೀಡಿದ್ದಾದರೆ, ಆತನ ನಿವೃತ್ತಿ ಬಳಿಕ ಈ ಹೆಚ್ಚುವರಿ ಹಣವನ್ನು ಆತನಿಂದ ವಸೂಲಿ ಮಾಡುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಈ ಬಗ್ಗೆ ಸೋಮವಾರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಸ್.ಎ. ನಜೀರ್ ಮತ್ತು ವಿಕ್ರಂ ನಾಥ್ ಅವರು, ನಿವೃತ್ತಿಯಾದ ನೌಕರಿನಿಂದ ವಸೂಲಿ ಮಾಡಬಾರದು ಎಂದು ಹೇಳಿರುವುದಕ್ಕೆ ನೌಕರನ ಹಕ್ಕನ್ನು ನ್ಯಾಯಾಲಯ ಎತ್ತಿ ಹಿಡಿದಿದೆ ಎಂದು ಭಾವಿಸಬೇಕಾಗಿಲ್ಲ. ಆದರೆ ಆತನಿಗೆ ಜೀವನ ನಡೆಸಲು ತೊಂದರೆಯಾಗಬಾರದು ಎಂಬ ಕಾರಣಕ್ಕೆ ಈ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.