ADVERTISEMENT

ಹೈದರಾಬಾದ್‌: ಬಿಆರ್‌ಎಸ್‌ ಶಾಸಕ ಕಾಂಗ್ರೆಸ್‌ಗೆ

ಪಿಟಿಐ
Published 7 ಏಪ್ರಿಲ್ 2024, 14:17 IST
Last Updated 7 ಏಪ್ರಿಲ್ 2024, 14:17 IST
.
.   

ಹೈದರಾಬಾದ್‌: ತೆಲಂಗಾಣದ ಬಿಆರ್‌ಎಸ್‌ ಶಾಸಕ ತೆಲ್ಲಂ ವೆಂಕಟರಾವ್‌ ಅವರು ಪಕ್ಷ ತೊರೆದು ಭಾನುವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು.

ಮುಖ್ಯಮಂತ್ರಿ ಎ. ರೇವಂತ್‌ ರೆಡ್ಡಿ ಮತ್ತು ಸಚಿವ ಪಿ. ಶ್ರೀನಿವಾಸ ರೆಡ್ಡಿ ಅವರ ಸಮ್ಮುಖದಲ್ಲಿ ವೆಂಕಟರಾವ್‌ ಅವರು ಭದ್ರಾಚಲಂ ಕ್ಷೇತ್ರದ ಹಲವು ಮಂದಿ ಬಿಆರ್‌ಎಸ್‌ ಮುಖಂಡರ ಜೊತೆಗೆ ಪಕ್ಷಕ್ಕೆ ಸೇರ್ಪಡೆಗೊಂಡರು. 

ವೆಂಕಟರಾವ್‌ ಅವರು ಭದ್ರಾಚಲಂ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಈಚೆಗೆ ಬಿಆರ್‌ಎಸ್‌ ತೊರೆದು ಕಾಂಗ್ರೆಸ್‌ಗೆ ಸೇರಿರುವ ಮೂರನೇ ಶಾಸಕರು ಇವರಾಗಿದ್ದಾರೆ.

ADVERTISEMENT

‘ರಾಹುಲ್‌ ಗಾಂಧಿ ಅವರ ಪಕ್ಷವು ಬಿಆರ್‌ಎಸ್‌ ಶಾಸಕರನ್ನು ಖರೀದಿಸುತ್ತಿದೆ’ ಎಂದು ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್‌ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.