ADVERTISEMENT

fact check: ಮುಸ್ಲಿಂ ವ್ಯಕ್ತಿ ಥಳಿಸಿದ್ದು ಹಿಂದೂ ಮಗುವನ್ನಲ್ಲ

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2023, 0:30 IST
Last Updated 28 ಫೆಬ್ರುವರಿ 2023, 0:30 IST
fact check: ಮುಸ್ಲಿಂ ವ್ಯಕ್ತಿ ಥಳಿಸಿದ್ದು ಹಿಂದೂ ಮಗುವನ್ನಲ್ಲ
fact check: ಮುಸ್ಲಿಂ ವ್ಯಕ್ತಿ ಥಳಿಸಿದ್ದು ಹಿಂದೂ ಮಗುವನ್ನಲ್ಲ   

ಎಂಟು ವರ್ಷದ ಮಗುವನ್ನು ವ್ಯಕ್ತಿಯೊಬ್ಬ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ‘ಹಿಂದೂ ಧರ್ಮಕ್ಕೆ ಸೇರಿದ ಬಾಲಕನನ್ನು ಇಸ್ಲಾಂ ಧರ್ಮೀಯ ವ್ಯಕ್ತಿಯೊಬ್ಬರು ಹೊಡೆಯುತ್ತಿದ್ದಾರೆ. ಹಿಂದೂ ಪೋಷಕರು ತಮ್ಮ ಮಗುವನ್ನು ಪಕ್ಕದ ಮುಸ್ಲಿಂ ಸಮುದಾಯದವರ ಮನೆಯಲ್ಲಿ ಬಿಟ್ಟು ಹೋಗಿದ್ದಾಗ ಈ ಕೃತ್ಯ ನಡೆದಿದೆ. ಜಿಹಾದಿ ಕೈಯಿಂದ ಹಿಂದೂ ಮಗು ನೋವು ಅನುಭವಿಸುತ್ತಿದೆ. ‘ಅಲ್ಲಾಹ್ ಪಾಕ್’ ಎಂದು ಹೇಳುವಂತೆ ಮಗುವಿಗೆ ಒತ್ತಾಯಿಸಿ ಥಳಿಸಲಾಗಿದೆ. ಹಿಂದೂಗಳೇ ಎಚ್ಚೆತ್ತುಕೊಳ್ಳಿ’ ಎಂಬುದಾಗಿ ವಿಡಿಯೊಗೆ ವಿವರಣೆ ನೀಡಲಾಗಿದೆ. ಆದರೆ ಇದು ಸುಳ್ಳು ಸುದ್ದಿ.

ಈ ವಿಡಿಯೊ ಕುರಿತು ಧರ್ಮದ ಆಯಾಮದಲ್ಲಿ ನಡೆಯುತ್ತಿರುವ ಚರ್ಚೆ ಸತ್ಯಕ್ಕೆ ದೂರವಾದುದು ಎಂದು ‘ದಿ ಲಾಜಿಕಲ್ ಇಂಡಿಯನ್’ ವೆಬ್‌ಸೈಟ್ ತಿಳಿಸಿದೆ. 2022ರ ಜುಲೈನಲ್ಲಿ, ಪಾಕಿಸ್ತಾನದ ಕರಾಚಿಯಲ್ಲಿ ನಡೆದ ಈ ಘಟನೆಯ ವಿಡಿಯೊವನ್ನು ಕೋಮುದ್ವೇಷ ಹರಡುವ ರೀತಿಯಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ. ಇಸ್ಮಾಯಿಲ್ ಎಂಬ ವ್ಯಕ್ತಿ ತನಗೆ ನಿದ್ದೆ ಮಾಡಲು ಬಿಡದೆ ಕಾಟ ಕೊಟ್ಟ ತನ್ನ ಮಗುವನ್ನು ಥಳಿಸಿದ್ದ. ಆತನ ಪತ್ನಿ ಥಳಿತದ ವಿಡಿಯೊ ಮಾಡಿ ಪೊಲೀಸರಿಗೆ ದೂರು ನೀಡಿದ್ದಳು. ಆರೋಪಿ ವಿರುದ್ಧ ಸಿಂಧ್ ಪ್ರಾಂತ್ಯದ ಪೊಲೀಸರು ಕ್ರಮ ಜರುಗಿಸಿದ್ದರು. ಇದನ್ನು ಪಾಕಿಸ್ತಾನದ 24 ನ್ಯೂಸ್, ಎಟಿಎನ್ ನ್ಯೂಸ್ ಸಂಸ್ಥೆಗಳು ವರದಿ ಮಾಡಿದ್ದವು. ಆರೋಪಿಯನ್ನು ಬಂಧಿಸಿದ್ದ ಚಿತ್ರವನ್ನು ಕರಾಚಿ ಪೊಲೀಸರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದರು. ಭಾರತಕ್ಕೂ ಈ ವಿಡಿಯೋಗೂ ಸಂಬಂಧವಿಲ್ಲ. ಇದು ಇತ್ತೀಚಿನ ಘಟನೆಯೂ ಅಲ್ಲ. ಹಾಗೆಯೇ ಹಿಂದೂ–ಮುಸ್ಲಿಂ ಧರ್ಮದ ಆಯಾಮದಲ್ಲಿ ನಡೆಯುತ್ತಿರುವ ಚರ್ಚೆಗೂ ಅರ್ಥವಿಲ್ಲ ಎಂದು ವೆಬ್‌ಸೈಟ್ ಸ್ಪಷ್ಟಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT