ADVERTISEMENT

ಆಲ್ಟ್‌ ನ್ಯೂಸ್‌ ದಾನಿಗಳ ಡೇಟಾವನ್ನು ಪೊಲೀಸರ ಜೊತೆ ಹಂಚಿಕೊಂಡ ರೇಜರ್‌ಪೇ: ಆರೋಪ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2022, 2:28 IST
Last Updated 6 ಜುಲೈ 2022, 2:28 IST
   

ನವದೆಹಲಿ: ತನಗೆ ದಾನ ನೀಡಿದವರ ಬಗೆಗಿನ ಡೇಟಾಗಳನ್ನು ಹಣಕಾಸು ತಂತ್ರಜ್ಞಾನ ಸೇವಾ ಸಂಸ್ಥೆ ‘ರೇಜರ್‌ಪೇ’ ಪೊಲೀಸರೊಂದಿಗೆ ಹಂಚಿಕೊಂಡಿದೆ ಎಂದು ಫ್ಯಾಕ್ಟ್‌ಚೆಕ್‌ ವೆಬ್‌ಸೈಟ್ ‘ಆಲ್ಟ್ ನ್ಯೂಸ್’ ಆರೋಪಿಸಿದೆ.

ಆಲ್ಟ್‌ ನ್ಯೂಸ್‌ ವೆಬ್‌ಸೈಟ್‌ನ ಸಹ–ಸಂಸ್ಥಾಪಕ ಮೊಹಮ್ಮದ್‌ ಜುಬೇರ್‌ ಪೊಲೀಸರ ವಶದಲ್ಲಿದ್ದಾರೆ. ಅವರು ಪಾಕಿಸ್ತಾನ ಸೇರಿದಂತೆ ಇತರ ದೇಶಗಳಿಂದ ರೇಜರ್‌ಪೇ ಮೂಲಕ ಹಣವನ್ನು ಪಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ರೇಜರ್‌ಪೇ ವಿರುದ್ಧ ಆಲ್ಟ್‌ ನ್ಯೂಸ್‌ ಆರೋಪ ಮಾಡಿದೆ.

ಈ ಕುರಿತು ಟ್ವೀಟ್‌ ಮಾಡಿದ್ದ ಆಲ್ಟ್‌ ನ್ಯೂಸ್‌, 'ವಿದೇಶಿ ಮೂಲಗಳಿಂದ ದೇಣಿಗೆ ಸ್ವೀಕರಿಸಿದ್ದೇವೆ ಎಂದು ಆರೋಪಿಸಲಾಗಿದೆ. ಆದರೆ ನಾವು ಹಾಗೆ ಹಣ ಪಡೆಯಲು ಸಾಧ್ಯವಿಲ್ಲ. ಪೊಲೀಸರ ಆರೋಪ ಸುಳ್ಳು. ಮಹಮ್ಮದ್ ಜುಬೈರ್ ವೈಯಕ್ತಿಕ ಖಾತೆಗೂ ಹಣ ಜಮಾ ಆಗಿಲ್ಲ. ಸಂಗ್ರಹಿಸುವ ಎಲ್ಲಾ ದೇಣಿಗೆಗಳು ಸಂಸ್ಥೆಯ ಬ್ಯಾಂಕ್ ಖಾತೆಗೆ ಸಂದಾಯವಾಗುತ್ತದೆ' ಎಂದು ತಿಳಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.