ADVERTISEMENT

ನಕಲಿ ಎನ್‌ಕೌಂಟರ್: ಪಂಜಾಬ್‌ನ ನಿವೃತ್ತ ಪೊಲೀಸ್ ಅಧಿಕಾರಿಗೆ 10 ವರ್ಷ ಕಠಿಣ ಸಜೆ

ಇಬ್ಬರು ಕಾನ್ಸ್‌ಟೇಬಲ್‌ಗಳನ್ನು ಕೊಲ್ಲಲಾಗಿದ್ದ 1993ರ ನಕಲಿ ಎನ್‌ಕೌಂಟರ್ ಪ್ರಕರಣ

ಪಿಟಿಐ
Published 24 ಜುಲೈ 2025, 14:11 IST
Last Updated 24 ಜುಲೈ 2025, 14:11 IST
_
_   

ಚಂಡೀಗಡ: ಮೊಹಾಲಿಯ ಸಿಬಿಐ ನ್ಯಾಯಾಲಯವೊಂದು 1993ರ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಪಂಜಾಬ್‌ನ ಪೊಲೀಸ್ ಅಧಿಕಾರಿಯೊಬ್ಬರಿಗೆ 10 ವರ್ಷಗಳ ಕಠಿಣ ಸೆರೆವಾಸ ಮತ್ತು ₹50 ಸಾವಿರ ದಂಡ ವಿಧಿಸಿದೆ. ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಗುಂಡಿಕ್ಕಿ ಕೊಂದು, ಅವರನ್ನು ಅಪರಿಚಿತ ಉಗ್ರಗಾಮಿಗಳು ಎಂದು ಉಲ್ಲೇಖಿಸಿ ಅಂತ್ಯಕ್ರಿಯೆ ನಡೆಸಲಾಗಿದ್ದ ಪ್ರಕರಣವಿದು.

ಶಿಕ್ಷೆಗೊಳಗಾದ ಅಪರಾಧಿ ಪರಂಜಿತ್ ಸಿಂಗ್ (67) ಘಟನೆ ವೇಳೆ ಅಮೃತಸರದ ಬಿಯಾಸ್‌ ಠಾಣಾಧಿಕಾರಿಯಾಗಿದ್ದರು ಮತ್ತು ಎಸ್‌ಪಿಯಾಗಿ ನಿವೃತ್ತಿ ಹೊಂದಿದ್ದರು.

ಬುಧವಾರದ ತನ್ನ ಆದೇಶದಲ್ಲಿ ನ್ಯಾಯಾಲಯವು ಇತರ ಮೂವರು ಆರೋಪಿಗಳಾದ, ಆಗಿನ ಇನ್ಸ್‌ಪೆಕ್ಟರ್ ಧರಂ ಸಿಂಗ್ (77), ಆಗಿನ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಕಾಶ್ಮೀರ್ ಸಿಂಗ್ (69) ಮತ್ತು ಆಗಿನ ಎಎಸ್‌ಐ ದರ್ಬಾರ ಸಿಂಗ್ (71) ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಮತ್ತೊಬ್ಬ ಆರೋಪಿ ಆಗಿನ ಸಬ್‌ ಇನ್ಸ್‌ಪೆಕ್ಟರ್ ರಾಮ್ ಮುಭಯಾ ಪ್ರಕರಣದ ವಿಚಾರಣೆ ಸಮಯದಲ್ಲಿ ಮೃತಪಟ್ಟಿದ್ದರು.

ADVERTISEMENT

1993ರ ಏಪ್ರಿಲ್‌ 18ರಂದು ಸ್ಕೂಟರ್ ಕಳ್ಳತನದ ಆರೋಪದಲ್ಲಿ ಇಬ್ಬರು ಕಾನ್‌ಸ್ಟೆಬಲ್‌ಗಳನ್ನು ವಶಕ್ಕೆ ಪಡೆದಿದ್ದರು. ನಂತರ ಇಬ್ಬರು ಅಪರಿಚಿತ ಉಗ್ರಗಾಮಿಗಳು ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಪ್ರತಿಪಾದಿಸಿ, ಅವರ ಮೃತದೇಹವನ್ನು ಗುರುತು ಪತ್ತೆಯಿಲ್ಲದೆ ಅಂತ್ಯಕ್ರಿಯೆ ನಡೆಸಲಾಗಿತ್ತು ಎಂದು ಸಿಬಿಐ ತನಿಖೆಯ ವೇಳೆ ಪತ್ತೆಹಚ್ಚಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.