ADVERTISEMENT

ನಕಲಿ ಔಷಧಗಳನ್ನು ಸಾಪ್ಟ್‌ವೇರ್ ಮೂಲಕ ಪತ್ತೆ ಮಾಡುತ್ತದೆ ಈ ಯಂತ್ರಗಳು..

ಪಿಟಿಐ
Published 3 ಡಿಸೆಂಬರ್ 2025, 16:07 IST
Last Updated 3 ಡಿಸೆಂಬರ್ 2025, 16:07 IST
   

ಮುಂಬೈ: ಸಾರ್ವಜನಿಕ ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ನಕಲಿ ಔಷಧ ಮಾರಾಟವನ್ನು ತಡೆಗಟ್ಟುವ ಉದ್ದೇಶದಿಂದ, ಕಲಬೆರಕೆ ಅಥವಾ ನಕಲಿ ಔಷಧಗಳನ್ನು ಪತ್ತೆ ಮಾಡುವ ಸಾಧನಗಳನ್ನು ಕೊಂಡುಕೊಳ್ಳಲು ಮಹಾರಾಷ್ಟ್ರ ಸರ್ಕಾರವು ಮುಂದಾಗಿದೆ.

ನಕಲಿ ಔಷಧಗಳನ್ನು ಪತ್ತೆ ಮಾಡುವ ಸಾಧನಗಳನ್ನು ಖರೀದಿ ಮಾಡುವ ಉದ್ದೇಶದಿಂದ ₹ 9.59 ಕೋಟಿ ಹಣವನ್ನು ಬುಧವಾರ ಬಿಡುಗಡೆಗೊಳಿಸಲಾಗಿದೆ. ಒಂದಕ್ಕೆ ₹ 1.19 ಕೋಟಿ ಬೆಲೆಯಿದ್ದು, ಒಟ್ಟು 8 ಮಿಷನ್‌ಗಳನ್ನು ಖರೀದಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಾಧನಗಳನ್ನು ಮಹಾರಾಷ್ಟ್ರದ ಠಾಣೆ, ಪುಣೆ, ಕೊಲ್ಹಾಪುರ, ನಾಸಿಕ್, ಛತ್ರಪತಿ ಸಂಭಾಜಿ ನಗರ, ಅಲೋಕ, ಲಾತೂರ್ ಹಾಗೂ ನಾಗ್ಪುರಗಳಲ್ಲಿ ಅಳವಡಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಔಷಧಗಳಲ್ಲಿನ ರಾಸಾಯನಿಕ ಅಂಶಗಳ ಪ್ರಮಾಣವನ್ನು ಈ ಮಿಷನ್‌ಗಳು ಸಾಪ್ಟ್‌ವೇರ್ ಮೂಲಕ ಪತ್ತೆ ಮಾಡುತ್ತವೆ. ಈ ಮೂಲಕ ಔಷಧಗಳ ಗುಣಮಟ್ಟವನ್ನು ಅತಿ ಸುಲಭವಾಗಿ ಪತ್ತೆ ಮಾಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.