ADVERTISEMENT

257 ಸುಳ್ಳು ಸುದ್ದಿ ಪ್ರಕರಣ ದಾಖಲು, 170 ಸುಳ್ಳು ಸುದ್ದಿಗಳು ಆನ್‌ಲೈನ್ ಸೃಷ್ಟಿ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2019, 14:00 IST
Last Updated 23 ಅಕ್ಟೋಬರ್ 2019, 14:00 IST
   

ನವದೆಹಲಿ: 2017ರಲ್ಲಿ 257 ಸುಳ್ಳು ಸುದ್ದಿ ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ (ಎನ್‌ಸಿಆರ್‌ಬಿ)ಅಂಕಿ ಅಂಶಗಳು ಹೇಳುತ್ತಿವೆ.

ಭಾರತದಲ್ಲಿನ ಅಪರಾಧಗಳು (ಸಿಐಐ) ನೀಡಿದ ಅಂಕಿ ಅಂಶಗಳನ್ನು ಆಧರಿಸಿ ಎನ್‌ಸಿಆರ್‌ಬಿ ಈ ದಾಖಲೆ ಬಿಡುಗಡೆ ಮಾಡಿದೆ.

ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ಜನರನ್ನು ಕೆರಳಿಸುವ ಸುಳ್ಳು ಸುದ್ದಿ ಮತ್ತು ವದಂತಿ, ಅಶಾಂತಿ ಸೃಷ್ಟಿಸುವ ತಪ್ಪಾದ ಮಾಹಿತಿ- ಈ ಎಲ್ಲ ಪ್ರಕರಣಗಳು ಐಪಿಸಿ ಸೆಕ್ಷನ್ 505ರ ಅಡಿಯಲ್ಲಿ ದಾಖಲಾಗುತ್ತವೆ.

ADVERTISEMENT
NCRB ಅಂಕಿಅಂಶ

ಸುಳ್ಳು ಸುದ್ದಿಗಳು ಮಧ್ಯಪ್ರದೇಶದಲ್ಲಿಯೇ ಜಾಸ್ತಿ
ಎನ್‌ಸಿಆರ್‌ಬಿ ಪ್ರಕಾರ ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಸುಳ್ಳು ಸುದ್ದಿ ಪ್ರಕರಣಗಳು ದಾಖಲಾಗಿವೆ.ಮಧ್ಯ ಪ್ರದೇಶದಲ್ಲಿ 138 ಪ್ರಕರಣಗಳು ದಾಖಲಾಗಿದ್ದುಉತ್ತರ ಪ್ರದೇಶದಲ್ಲಿ 32 ಪ್ರಕರಣಗಳು ದಾಖಲಾಗಿವೆ.

ದಕ್ಷಿಣ ಭಾರತದ ರಾಜ್ಯಗಳಾದ ಕೇರಳದಲ್ಲಿ 18 ಮತ್ತು ತಮಿಳುನಾಡಿನಲ್ಲಿ 16 ಪ್ರಕರಣಗಳು ದಾಖಲಾಗಿವೆ.
257 ಸುಳ್ಳು ಸುದ್ದಿ ಪ್ರಕರಣಗಳು 269 ಮಂದಿ ಮೇಲೆ ಪರಿಣಾಮ ಬೀರಿದೆ.

ಮಧ್ಯಪ್ರದೇಶದಲ್ಲಿ ಸುಳ್ಳು ಸುದ್ದಿ ಪ್ರಕರಣಗಳು151 , ಉತ್ತರ ಪ್ರದೇಶದಲ್ಲಿ 33, ಕೇರಳದಲ್ಲಿ 19, ತಮಿಳುನಾಡು 11 ಮತ್ತು ತೆಲಂಗಾಣದಲ್ಲಿ 11 ಮಂದಿಯನ್ನು ಬಾಧಿಸಿದೆ.

ಸುಳ್ಳು ಸುದ್ದಿ ಹಬ್ಬಿದ ನಗರಗಳು
ಎನ್‌ಸಿಆರ್‌ಬಿ ಅಂಕಿ ಅಂಶಗಳ ಪ್ರಕಾರ ಲಖನೌ ನಗರದಲ್ಲಿ 20 ಸುಳ್ಳು ಸುದ್ದಿ ಪ್ರಕರಣ ದಾಖಲಾಗಿದೆ. ಅದೇ ವೇಳೆ ಚೆನ್ನೈ-5 , ಬೆಂಗಳೂರು-2, ಮುಂಬೈ, ಕೋಯಿಕ್ಕೋಡ್, ಸೂರತ್ ಮತ್ತು ಅಹಮದಾಬಾದ್‌ನಲ್ಲಿ ತಲಾ 1 ಪ್ರಕರಣ ದಾಖಲಾಗಿದೆ.

ಆನ್‌ಲೈನ್ ಮೂಲಕ ಹರಡಿದ್ದು 170 ಸುಳ್ಳು ಸುದ್ದಿ
ಆನ್‌ಲೈನ್‌ನಲ್ಲಿ ಹರಡುವ ಫೇಕ್‌ನ್ಯೂಸ್‌ ಪ್ರಕರಣಗಳು ಐಪಿಸಿ ಸೆಕ್ಷನ್ 505 ಮತ್ತು ಐಟಿ ಕಾಯ್ದೆಯಡಿ ದಾಖಲಾಗುತ್ತವೆ. ಈ ರೀತಿಯ 170 ಪ್ರಕರಣಗಳು ದಾಖಲಾಗಿವೆ.

ಸಂವಹನ ಮಾಧ್ಯಮಗಳ ಮೂಲಕ ಅಥವಾ ಸಂವಹನ ಮಾಧ್ಯಮಗಳನ್ನು ಗುರಿಯಾಗಿರಿಸಿ ಈ ರೀತಿಯ ಸುಳ್ಳು ಸುದ್ದಿಗಳನ್ನು ಹರಡಲಾಗಿದೆ ಎಂದು ಎನ್‌ಸಿಆರ್‌ಬಿ ಹೇಳಿದೆ.ಇಂತಾ ಪ್ರಕರಣಗಳಲ್ಲಿ ಅಸ್ಸಾಂ ಮುಂದಿದೆ. ಇಲ್ಲಿ 56 ಪ್ರಕರಣಗಳು ದಾಖಲಾಗಿದ್ದು ಇನ್ನುಳಿದಂತೆ ಉತ್ತರ ಪ್ರದೇಶದಲ್ಲಿ 21 ಮತ್ತು ಮಧ್ಯಪ್ರದೇಶದಲ್ಲಿ17 ಪ್ರಕರಣಗಳು ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.