ADVERTISEMENT

ರೈತರ ಪ್ರತಿಭಟನೆ: ಟಿಕ್ರಿ ಗಡಿ ಸಮೀಪದ ಹಳ್ಳಿಯಲ್ಲಿ ರೈತ ಸಾವು

ಪಿಟಿಐ
Published 17 ಡಿಸೆಂಬರ್ 2020, 12:25 IST
Last Updated 17 ಡಿಸೆಂಬರ್ 2020, 12:25 IST
ಟಿಕ್ರಿ ಗಡಿ ಸಮೀಪ ರೈತರ ಪ್ರತಿಭಟನೆ–ಸಂಗ್ರಹ ಚಿತ್ರ
ಟಿಕ್ರಿ ಗಡಿ ಸಮೀಪ ರೈತರ ಪ್ರತಿಭಟನೆ–ಸಂಗ್ರಹ ಚಿತ್ರ   

ಚಂಡಿಗಡ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿರುವ ಟಿಕ್ರಿ ಗಡಿ ಭಾಗದ ಸಮೀಪದ ಹಳ್ಳಿಯೊಂದರಲ್ಲಿ 38ರ ವರ್ಷದ ರೈತರೊಬ್ಬರು ಗುರುವಾರ ಮುಂಜಾನೆ ಸಾವನ್ನಪ್ಪಿದ್ದಾರೆ.

ಮೃತ ರೈತರನ್ನು ಬತ್ತಿಂಡ ಜಿಲ್ಲೆಯ ತುಂಗ್ವಾಲಿ ಹಳ್ಳಿಯ ನಿವಾಸಿ ಜೈಸಿಂಗ್‌ ಎಂದು ಗುರುತಿಸಲಾಗಿದೆ. ಇವರ ಸಹೋದರ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ–ದೆಹಲಿ ಗಡಿಯಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಭಾರತೀಯ ಕಿಸಾನ್ ಸಂಘ(ಬಿಕೆಯು–ಏಕ್ತಾ ಉಗ್ರಹಾನ್‌) ಮುಖಂಡ ಶಿಂಗಾರ್ ಸಿಂಗ್ ತಿಳಿಸಿದ್ದಾರೆ.

ರೈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ನಂತರ ಸಾವಿಗೆ ಕಾರಣ ತಿಳಿಯಬಹುದು ಎಂದು ಬಹದ್ದೂರ್‌ಗಡ ಠಾಣೆಯ ಪೊಲಿಸ್ ಅಧಿಕಾರಿ ತಿಳಿಸಿದ್ದಾರೆ.

ADVERTISEMENT

ದೆಹಲಿಯ ಗಡಿಭಾಗಗಳಲ್ಲಿ ರೈತರ ಪ್ರತಿಭಟನೆ ಆರಂಭವಾದಾಗಿನಿಂದ ಪಂಜಾಬ್‌ನಲ್ಲಿ ವಿವಿಧ ಕಾರಣಗಳಿಂದಾಗಿ 20 ಮಂದಿ ರೈತರು ಸಾವನ್ನಪ್ಪಿದ್ದಾರೆ ಎಂದು ಬಿಕೆಯು ಸಂಘಟನೆಯ ಮುಖಂಡರೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.