ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ದೇಶದ ಕೋಟ್ಯಂತರ ರೈತರಿಗೆ ಲಾಭವಾಗಿದೆ. ನೈಸರ್ಗಿಕ ವಿಕೋಪದಿಂದಾಗುವ ಹಾನಿ ವಿರುದ್ಧ ರೈತರಿಗೆ ಈ ಯೋಜನೆಯಿಂದ ರಕ್ಷಣೆ ಸಿಕ್ಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.
ಯೋಜನೆ ಆರಂಭವಾಗಿ ಐದು ವರ್ಷ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಬುಧವಾರ ಅವರು ಟ್ವೀಟ್ ಮಾಡಿದ್ದಾರೆ.
ನಮೋ ಆ್ಯಪ್‌ನಲ್ಲಿ ಈ ಯೋಜನೆ ಕುರಿತು ವಿವರಗಳಿವೆ. ರೈತರು ಮಾಹಿತಿ ಪಡೆಯುವಂತೆಯೂ ಅವರು ಟ್ವೀಟ್ ಮಾಡಿದ್ದಾರೆ.
‘ಈ ಯೋಜನೆಯಡಿ ವಿಮಾ ಪರಿಹಾರ ವ್ಯಾಪ್ತಿಗೆ ಹೆಚ್ಚು ಬೆಳೆಗಳನ್ನು ಸೇರಿಸಲಾಗಿದೆ. ಹೀಗಾಗಿ ಹಾನಿಗೆ ಒಳಗಾಗುವ ಆತಂಕವನ್ನು ದೂರ ಮಾಡಿ, ರೈತರಿಗೆ ಅನುಕೂಲವನ್ನು ಮಾಡಿದೆ. ಈ ಯೋಜನೆಯಡಿ ಲಾಭ ಪಡೆದಿರುವ ರೈತರನ್ನು ಅಭಿನಂದಿಸುವೆ’ ಎಂದೂ ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.