ADVERTISEMENT

ಮಗನೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವತಿಯನ್ನು ವರಿಸಿದ 55 ವರ್ಷದ ವ್ಯಕ್ತಿ!

ಪಿಟಿಐ
Published 20 ಜೂನ್ 2025, 13:36 IST
Last Updated 20 ಜೂನ್ 2025, 13:36 IST
<div class="paragraphs"><p>(ಸಾಂದರ್ಭಿಕ ಚಿತ್ರ)</p></div>

(ಸಾಂದರ್ಭಿಕ ಚಿತ್ರ)

   

ಐಸ್ಟೋಕ್ ಚಿತ್ರ

ರಾಮ್‌ಪುರ: ತನ್ನ 17 ವರ್ಷದ ಪುತ್ರನೊಂದಿಗೆ ನಿಶ್ಚಿತಾರ್ಥವಾಗಿದ್ದ ಮಹಿಳೆಯನ್ನು 55 ವರ್ಷದ ವ್ಯಕ್ತಿಯೊಬ್ಬ ಮದುವೆಯಾದ ಆಶ್ಚರ್ಯಕರ ಘಟನೆ ಉತ್ತರ ಪ್ರದೇಶದ ರಾಮ್‌ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ.

ADVERTISEMENT

ಬನ್‌ಸಂಗ್ನಾಲಿ ಗ್ರಾಮದಲ್ಲಿ ಇತ್ತೀಚೆಗೆ ಘಟನೆ ನಡೆದಿದ್ದು, ಕುಟುಂಬಸ್ಥರು ಹೇಳಿಕೊಂಡ ಬಳಿಕ ಗುರುವಾರ ವಿಷಯ ಜಾಹೀರಾಗಿದೆ.

ಆರು ಮಕ್ಕಳ ತಂದೆ ಮತ್ತು ಮೂರು ಮಕ್ಕಳ ಅಜ್ಜನಾಗಿರುವ ಶಕೀಲ್ ಎಂಬವರೇ ಮಗನಿಗೆ ನಿಶ್ಚಿಯವಾಗಿದ್ದ ಮಹಿಳೆಯನ್ನು ವರಿಸಿದವರು.

ಕಳೆದ ತಿಂಗಳು ತಮ್ಮ ಮಗಳ ಮದುವೆಯ ನಂತರ ಸಮೀಪದ ಹಳ್ಳಿಯ 22 ವರ್ಷದ ಆಯೇಷಾ (ಹೆಸರು ಬದಲಾಯಿಸಲಾಗಿದೆ) ಎಂಬ ಮಹಿಳೆಯನ್ನು ಪದೇ ಪದೇ ಭೇಟಿಯಾಗುತ್ತಿದ್ದರು ಎಂದು ಅವರ ಪತ್ನಿ ಶಬಾನಾ ಹೇಳಿದ್ದಾರೆ.

ಮಗ ಅಮಾನ್ (ಹೆಸರು ಬದಲಾಯಿಸಲಾಗಿದೆ) ಜೊತೆ ಆಯೇಷಾಳ ಮದುವೆ ಏರ್ಪಾಡು ಮಾಡುತ್ತಿರುವುದಾಗಿಯೂ, ಅದಕ್ಕಾಗಿ ಆಕೆಯನ್ನು ಆಗಾಗ್ಗೆ ಭೇಟಿಯಾಗುತ್ತಿರುವುದಾಗಿಯೂ ಹೇಳಿದ್ದಾರೆ.

ಆರ್ಥಿಕ ಸಮಸ್ಯೆ ಹಾಗೂ ಅಮಾನ್‌ನ ವಯಸ್ಸನ್ನು ಉಲ್ಲೇಖಿಸಿ ಆರಂಭದಲ್ಲಿ ಕುಟುಂಬ ಮದುವೆಯನ್ನು ವಿರೋಧಿಸಿದೆ. ಆದರೆ ಶಕೀಲ್ ಆಯೇಷಾಳನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದರು ಎಂದು ಶಬಾನಾ ಆರೋಪಿಸಿದ್ದಾರೆ.

ಈ ನಡುವೆ ತಂದೆ ಹಾಗೂ ಆಯೇಷಾ ನಡುವೆ ಆಗಾಗ್ಗೆ ಕರೆಗಳು ಬರುತ್ತಿರುವುದನ್ನು ಗಮನಿಸಿ ಅಮನ್‌ಗೆ ಶಂಕೆ ಮೂಡಿದೆ.

‘ಒಮ್ಮೆ ನಾನು ಅವನ ಫೋನ್ ಅನ್ನು ಪರಿಶೀಲಿಸಿದಾಗ ಕೆಲವು ಆಕ್ಷೇಪಾರ್ಹ ವಿಷಯಗಳು ಕಂಡುಬಂದವು. ಹೀಗಾಗಿ ಆಯೇಷಾಳ ಜೊತೆ ಸಂಬಂಧ ಮುಂದುವರಿಸಲು ನಿರಾಕರಿಸಿದೆ’ ಎಂದು ಅಮನ್ ತಿಳಿಸಿದ್ದಾರೆ.

ಕಳೆದ ವಾರ ಕೆಲಸದ ನೆಪದಲ್ಲಿ ದೆಹಲಿಗೆ ತೆರಳಿದ ಶಕೀಲ್, ಅಲ್ಲಿಂದ ಪತ್ನಿ ಮತ್ತು ಕುಟುಂಬದ ಇತರ ಸದಸ್ಯರಿಗೆ ಕರೆ ಮಾಡಿ ತಾನು ಆಯೇಷಾಳನ್ನು ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾರೆ.

‘ನನ್ನ ಸೊಸೆಯಾಗಬೇಕಿದ್ದ ಮಹಿಳೆ ಈಗ ನನ್ನ ಗಂಡನ ಹೆಂಡತಿಯಾಗಿದ್ದಾಳೆ, ಭಾವಿ ಸೊಸೆ ಎಂದು ಪರಿಗಣಿಸಲ್ಪಟ್ಟವಳೊಂದಿಗೆ ಈಗ ಮನೆ ಹಂಚಿಕೊಳ್ಳಬೇಕಾಗಿ ಬಂದಿದೆ ಎಂದು ಶಬನಾ ದು:ಖ ವ್ಯಕ್ತಪಡಿಸಿದ್ದಾರೆ.

ಈ ವಿಷಯದಲ್ಲಿ ಇಲ್ಲಿಯವರೆಗೆ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

‘ಘಟನೆಯ ಬಗ್ಗೆ ನಮಗೆ ತಿಳಿದಿದೆ, ಆದರೆ ಇಲ್ಲಿಯವರೆಗೆ ಯಾವುದೇ ಔಪಚಾರಿಕ ದೂರು ಬಂದಿಲ್ಲ’ ಎಂದು ಭೋಟಾ ಠಾಣಾಧಿಕಾರಿ ಅಮರ್ ಸಿಂಗ್ ರಾಥೋಡ್ ಶುಕ್ರವಾರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.