ADVERTISEMENT

ಫೌಜಾ ಸಿಂಗ್ ಸಾವು: ಅಫಘಾತ ಎಸಗಿದ ಆರೋಪಿಯ ಬಂಧನ

ಪಿಟಿಐ
Published 16 ಜುಲೈ 2025, 14:22 IST
Last Updated 16 ಜುಲೈ 2025, 14:22 IST
ಫೌಜಾ ಸಿಂಗ್‌
ಫೌಜಾ ಸಿಂಗ್‌   

ಚಂಡೀಗಢ: ‘ಶತಾಯುಷಿ’ ಮ್ಯಾರಥಾನ್‌ ಓಟಗಾರ ಫೌಜಾ ಸಿಂಗ್‌ ಡಿಕ್ಕಿ ಅವರಿಗೆ ಕಾರಿನಲ್ಲಿ ಡಿಕ್ಕಿ ಹೊಡೆದು ಸಾವಿಗೆ ಕಾರಣನಾದ ಕೆನಡಾ ಮೂಲದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಅಮೃತ್‌ಪಾಲ್‌ ಸಿಂಗ್‌ ಧಿಲಾನ್‌(26)ನ ಎಂಬಾತನನ್ನು ಮಂಗಳವಾರ ರಾತ್ರಿ ಬಂಧಿಸಲಾಗಿದೆ ಮತ್ತು ಆತನ ಬಳಿಯಿದ್ದ ಎಸ್‌ಯುವಿ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಧಿಲಾನ್‌ ಪಂಜಾಬ್‌ನ ಕರ್ತಾರ್‌ಪುರದ ನಿವಾಸಿಯಾಗಿದ್ದು, ಕೆನಡಾದಲ್ಲಿ ಉದ್ಯೋಗದಲ್ಲಿದ್ದಾರೆ. ಕಳೆದ ತಿಂಗಳಷ್ಟೆ ಭಾರತಕ್ಕೆ ಬಂದಿದ್ದರು.

ADVERTISEMENT

‘ಯಾವೊದೋ ಕೆಲಸಕ್ಕೆ ತೆರಳುವ ಆತುರದಲ್ಲಿದ್ದ ಧಿಲಾನ್‌ ವೇಗವಾಗಿ ಕಾರು ಓಡಿಸುತ್ತಿದ್ದರು. ಈ ವೇಳೆ ಕಾರು ಫೌಜಾ ಸಿಂಗ್‌ ಅವರಿಗೆ ಡಿಕ್ಕಿ ಹೊಡೆದಿದೆ. ಭಯಗೊಂಡು ಅಲ್ಲಿಂದ ಪರಾರಿಯಾಗಿರುವುದಾಗಿ ಆರೋಪಿ ಹೇಳಿಕೆ ನೀಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಜಲಂಧರ್‌– ಪಠಾಣ್‌ಕೋಟ್‌ ಹೆದ್ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಫೌಜಾ ಅವರಿಗೆ ಕಾರು ಡಿಕ್ಕಿ ಹೊಡೆದಿದೆ. ‘ಕಾರು ಡಿಕ್ಕಿಯಾದ ರಭಸಕ್ಕೆ ಫೌಜಾ ಅವರು 6ರಿಂದ 7 ಅಡಿ ದೂರದಲ್ಲಿ ಬಿದ್ದಿದ್ದರು’ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.