ನವದೆಹಲಿ: ಮಹಿಳಾ ಮತ್ತು ಏಕ ಪೋಷಕ (ಸಿಂಗಲ್ ಪೇರೆಂಟ್) ಪುರುಷ ಸರ್ಕಾರಿ ಉದ್ಯೋಗಿಗಳು 730 ದಿನಗಳ ‘ಮಕ್ಕಳ ಪಾಲನಾ ರಜೆ’ಗೆ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸಿಬ್ಬಂದಿ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಲೋಕಸಭೆಗೆ ಬುಧವಾರ ಲಿಖಿತ ಉತ್ತರ ನೀಡಿದರು.
ಕೇಂದ್ರ ನಾಗರಿಕ ಸೇವೆಗಳ (ರಜೆ) ನಿಯಮ, 1972ರ ಅಡಿ ಅಧಿನಿಯಮ 43–ಸಿ ಪ್ರಕಾರ, ನಾಗರಿಕ ಸೇವೆಗಳ ಮತ್ತು ಕೇಂದ್ರ ಸರ್ಕಾರದ ಉದ್ಯೋಗಿಗಳು ತಮ್ಮ ಮೊದಲ ಇಬ್ಬರು ಮಕ್ಕಳಿಗೆ 18 ವರ್ಷ ವಯಸ್ಸು ತುಂಬುವವರೆಗೆ ಅವರ ಪಾಲನೆಗಾಗಿ ಸೇವಾವಧಿಯಲ್ಲಿ ಒಟ್ಟು 730 ದಿನಗಳು ರಜೆ ಪಡೆಯಬಹುದು. ಆದರೆ, ಅಂಗವಿಕಲ ಮಕ್ಕಳಿಗೆ ವಯಸ್ಸಿನ ಮಿತಿ ಇರುವುದಿಲ್ಲ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.