ಮಂಗ
ಸಮಸ್ತಿಪುರ(ಬಿಹಾರ): ಎರಡು ಮಂಗಗಳ ನಡುವಿನ ಕಿತ್ತಾಟ ರೈಲ್ವೆ ಸೇವೆಯಲ್ಲಿ ವ್ಯತ್ಯಯ ಉಂಟುಮಾಡಿರುವ ಘಟನೆ ಬಿಹಾರದ ಸಮಸ್ತಿಪುರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ಲಾಟ್‌ಫಾರ್ಮ್ ಸಂಖ್ಯೆ 4ರಲ್ಲಿ ಎರಡು ಕೋತಿಗಳು ಬಾಳೆಹಣ್ಣಿಗಾಗಿ ಕಿತ್ತಾಡುತ್ತಿದ್ದ ಸಂದರ್ಭ ಈ ಘಟನೆ ನಡೆದಿದೆ.
‘ಕಿತ್ತಾಡುತ್ತಿದ್ದ ಮಂಗಗಳ ಪೈಕಿ ಒಂದು ಮಂಗ ಇದ್ದಕ್ಕಿದ್ದಂತೆ ಯಾವುದೋ ಒಂದು ವಸ್ತುವನ್ನು ಮತ್ತೊಂದು ಮಂಗದ ಕಡೆಗೆ ಎತ್ತಿ ಎಸೆದಿದೆ. ಆ ವಸ್ತು ಓವರ್ ಹೆಡ್ ವೈರ್‌ಗೆ ಬಡಿದು ವಿದ್ಯುತ್ ತಂತಿ ತುಂಡಾಗಿ ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಇದರಿಂದಾಗಿ ಕೆಲಕಾಲ ರೈಲುಗಳ ಸಂಚಾರ ಸ್ಥಗಿತಗೊಂಡಿತ್ತು’ಎಂದು ಪೂರ್ವ ಕೇಂದ್ರ ರೈಲ್ವೆ ನಿಲ್ದಾಣದ ಪ್ರಧಾನ ಸಾರ್ವನಿಕ ಸಂಪರ್ಕಾಧಿಕಾರಿ ಸರಸ್ವತಿ ಚಂದ್ರ ಪಿಟಿಐಗೆ ತಿಳಿಸಿದ್ದಾರೆ.
ಕೂಡಲೇ ಇದನ್ನು ಗಮನಿಸಿದ ರೈಲ್ವೆ ಅಧಿಕಾರಿಗಳು, ಸಮಸ್ಯೆಯನ್ನು ಬಗೆಹರಿಸಿ ರೈಲ್ವೆ ಸೇವೆ ಪುನರಾರಂಭಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.