ADVERTISEMENT

ಕೇರಳ: ಹಣ ವಂಚನೆ ಆರೋಪದಡಿ ಚಿತ್ರ ನಿರ್ದೇಶಕ ಶ್ರೀಕುಮಾರ್‌ ಮೆನನ್ ಬಂಧನ

ಪಿಟಿಐ
Published 7 ಮೇ 2021, 14:48 IST
Last Updated 7 ಮೇ 2021, 14:48 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಆಲಪ್ಪುಳ (ಕೇರಳ): ಉದ್ಯಮ ಸಮೂಹವೊಂದಕ್ಕೆ ₹5 ಕೋಟಿ ವಂಚಿಸಿದ ಆರೋಪದ ಮೇಲೆ ಮಲಯಾಳಂ ಸಿನಿಮಾರಂಗದ ಜನಪ್ರಿಯ ನಿರ್ದೇಶಕ ವಿ.ಎ. ಶ್ರೀಕುಮಾರ್‌ ಮೆನನ್ ಅವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ರಾತ್ರಿ ಉತ್ತರ ಪಾಲಕ್ಕಾಡ್‌ ಜಿಲ್ಲೆಯಲ್ಲಿರುವ ಮೆನನ್‌ ಮನೆಯಲ್ಲಿಯೇ ಅವರನ್ನು ವಶಕ್ಕೆ ಪಡೆಯಲಾಗಿದೆ. ಐಪಿಸಿ ಸೆಕ್ಷನ್‌ 420(ಮೋಸ, ವಂಚನೆ) ಅಡಿ ಮೆನನ್‌ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಚಲನಚಿತ್ರವನ್ನು ನಿರ್ಮಿಸುವ ನೆಪದಲ್ಲಿ ಕನಿಷ್ಠ ₹ ಐದು ಕೋಟಿ ವಂಚಿಸಿರುವುದಾಗಿ ಉದ್ಯಮ ಸಮೂಹ ಮೆನನ್‌ ದೂರು ನೀಡಿತ್ತು. ಈ ಸಂಬಂಧ, ಮೆನನ್‌ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿತ್ತು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.