ADVERTISEMENT

ಸರ್ಕಾರಿ ನೌಕರರ ಪಿಂಚಣಿ ಸಮಸ್ಯೆ ಪರಿಹರಿಸಲು ಸಮಿತಿ ರಚನೆ: ನಿರ್ಮಲಾ ಸೀತಾರಾಮನ್

ಪಿಟಿಐ
Published 24 ಮಾರ್ಚ್ 2023, 11:09 IST
Last Updated 24 ಮಾರ್ಚ್ 2023, 11:09 IST
ಲೋಕಸಭೆಯಲ್ಲಿ ಆಡಳಿತ ಪಕ್ಷ– ವಿಪಕ್ಷ ನಡುವಿನ ಗದ್ದಲದ ಮಧ್ಯೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಸೂದೆ ಮಂಡಿಸಿದರು (ಪಿಟಿಐ ಚಿತ್ರ)
ಲೋಕಸಭೆಯಲ್ಲಿ ಆಡಳಿತ ಪಕ್ಷ– ವಿಪಕ್ಷ ನಡುವಿನ ಗದ್ದಲದ ಮಧ್ಯೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಸೂದೆ ಮಂಡಿಸಿದರು (ಪಿಟಿಐ ಚಿತ್ರ)    

ನವದೆಹಲಿ: ದೇಶದ ಆರ್ಥಿಕತೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರಿ ನೌಕರರ ಪಿಂಚಣಿ ಸಮಸ್ಯೆ ಪರಿಹರಿಸಲು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶುಕ್ರವಾರ ಹೇಳಿದರು.

ಸಂಸತ್ತಿನ ಎರಡನೇ ಬಜೆಟ್ ಅಧಿವೇಶನದಲ್ಲಿ 2023ರ ಹಣಕಾಸು ಮಸೂದೆ ಮಂಡಿಸುವ ವೇಳೆ ಅವರು,‘ ವಿದೇಶ ಪ್ರಯಾಣಕ್ಕೆ ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವುದನ್ನು ಉದಾರೀಕೃತ ಹಣ ರವಾನೆ ಯೋಜನೆಯಡಿ(ಎಲ್‌ಆರ್‌ಎಸ್‌) ತರಲಾಗಿಲ್ಲ. ಇದಕ್ಕೆ, ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಲಾಗುವುದು‘ ಎಂದು ಲೋಕಸಭೆಯಲ್ಲಿ ಹೇಳಿದರು.

‘ಜನಸಾಮಾನ್ಯರಿಗೆ ಹೊರೆಬೀಳದಂತೆ ದೇಶದ ಹಣಕಾಸು ಸ್ಥಿತಿ ಗಮನದಲ್ಲಿಟ್ಟುಕೊಂಡು ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯಲ್ಲಿನ ಸಮಸ್ಯೆ ನಿವಾರಿಸಲು ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ರಾಜ್ಯ ಹಾಗೂ ದೇಶಕ್ಕೆ ಅಳವಡಿಕೆಯಾಗುವಂತೆ ಸಮಿತಿ ಪರಿಹಾರ ಸೂಚಿಸಬೇಕು ಎಂದು ತಿಳಿಸಲಾಗಿದೆ‘ ಎಂದರು.

ADVERTISEMENT

ಅಲ್ಲದೇ,‘ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿಸುವಿಕೆಯು ಉದಾರೀಕೃತ ಹಣ ರವಾನೆ ಯೋಜನೆಯಡಿ ಬರುವುದಿಲ್ಲ. ವಿದೇಶ ಪ್ರಯಾಣಕ್ಕಾಗಿ ಹಣ ಪಾವತಿಗೆ ಕ್ರೆಡಿಟ್ ಕಾರ್ಡ್ ಬಳಸಿ ಟ್ಯಾಕ್ಸ್ ಕಡಿತಗಳಿಂದ ಪಾರಾಗುತ್ತಿದ್ದಾರೆ. ಇದರಲ್ಲಿನ ಸಮಸ್ಯೆಗಳನ್ನೂ ಪರಿಹರಿಸಬೇಕಿದೆ‘ ಎಂದು ನಿರ್ಮಲಾ ತಿಳಿಸಿದರು.

ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷಗಳ ಗದ್ದಲದ ನಡುವೆಯೇ ಹಣಕಾಸು ಮಸೂದೆ 2023 ಅನುಮೋದನೆಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.