ADVERTISEMENT

ಡಿಜಿಟಲ್ ಹಣಕಾಸು ವ್ಯವಹಾರಗಳಲ್ಲಿ ವಂಚನೆ ಪ್ರಕರಣಗಳು ಏರಿಕೆಯಾಗಿವೆ: ಅಜಿತ್ ಡೊಭಾಲ್

ಪಿಟಿಐ
Published 18 ಸೆಪ್ಟೆಂಬರ್ 2020, 15:16 IST
Last Updated 18 ಸೆಪ್ಟೆಂಬರ್ 2020, 15:16 IST
ಅಜಿತ್ ಡೊಭಾಲ್
ಅಜಿತ್ ಡೊಭಾಲ್    

ತಿರುವನಂತಪುರಂ: ಆನ್‌ಲೈನ್‌ನಲ್ಲಿ ಎಚ್ಚರದಿಂದ ವ್ಯವಹರಿಸಿ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್ ನಾಗರಿಕರಿಗೆಸಲಹೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಹೊತ್ತಲ್ಲಿ ಡಿಜಿಟಲ್ ಹಣ ವ್ಯವಹಾರಗಳನ್ನು ಜನರು ಹೆಚ್ಚಾಗಿ ಬಳಸುವುದರಿಂದ ಆನ್‌ಲೈನ್ ವಂಚನೆ ಪ್ರಕರಣಗಳು ಜಾಸ್ತಿ ಆಗಿದೆಎಂದು ಅವರು ಹೇಳಿದ್ದಾರೆ.

ಶುಕ್ರವಾರ ಕೇರಳ ಪೊಲೀಸ್ ಮತ್ತುಸೊಸೈಟಿ ಫಾರ್ ದಿ ಪೊಲೀಸಿಂಗ್ ಆಫ್ ಸೈಬರ್‌ಸ್ಪೇಸ್ ಆ್ಯಂಡ್ ಇನ್ಫಾರ್ಮೇಷನ್ ಸೆಕ್ಯೂರಿಟಿ ರಿಸರ್ಚ್ ಅಸೋಸಿಯೇಷನ್ ಸಹಯೋಗದಲ್ಲಿ ಆಯೋಜಿಸಿದ್ದ ಸೈಬರ್ ಸೆಕ್ಯುರಿಟಿ ವರ್ಚುವಲಿ ಅಟ್ ದಿ COCONXIII-2020, ಮಾಹಿತಿ ಸುರಕ್ಷೆ ಮತ್ತು ಹ್ಯಾಕಿಂಗ್ ಸಮ್ಮೇಳನದಲ್ಲಿ ಡೊಭಾಲ್ಉಪನ್ಯಾಸ ನೀಡಿದ್ದಾರೆ.

ಕೋವಿಡ್ ಸಾಂಕ್ರಾಮಿಕವು ಕೆಲಸದ ವಾತಾವರಣದಲ್ಲಿ ಬದಲಾವಣೆಯನ್ನು ತಂದಿದೆ. ಕೈಯಲ್ಲಿ ನಗದು ನೀಡುವ ಬದಲು ಜನರು ಡಿಜಿಟಲ್ ಪೇಮೆಂಟ್ ಫ್ಲಾಟ್‌ಫಾರಂಗಳನ್ನು ಬಳಸುತ್ತಾರೆ. ಆನ್‌ಲೈನ್‌ನಲ್ಲಿ ಮಾಹಿತಿ ಹಂಚಲ್ಪಡುತ್ತದೆ. ಅದೇ ವೇಳೆ ಸಾಮಾಜಿಕ ತಾಣದಲ್ಲಿಯೂ ಸಕ್ರಿಯವಾಗಿರುವವರ ಸಂಖ್ಯೆ ಹೆಚ್ಚಿದೆ.ನಾವು ಒಂದು ಹಂತಕ್ಕೆ ನಮ್ಮ ಆನ್‌ಲೈನ್ ವ್ಯವಹಾರಗಳನ್ನು ಸುರಕ್ಷಿತವಾಗಿ ನಿರ್ವಹಿಸಿದರೂ ವಂಚನೆ ನಡೆಸುವವರು ಅಲ್ಲಿಯೂ ಬೇರೊಂದು ಉಪಾಯಗಳನ್ನು ಕಂಡುಕೊಳ್ಳುತ್ತಾರೆ ಎಂದಿದ್ದಾರೆ ಡೊಭಾಲ್.

ADVERTISEMENT

ಸೈಬರ್ ಹೈಜೀನ್‌ ಬಗ್ಗೆ ಜಾಗೃತಿ ನಿಯಮಿತವಾದುದರಿಂದ ಸೈಬರ್ಅಪರಾಧಗಳ ಸಂಖ್ಯೆ ಶೇ.500 ಹೆಚ್ಚಾಗಿದೆ. ಜನರು ಡಿಜಿಟಲ್ ಫ್ಲಾಟ್‌ಫಾರಂ‌ನ್ನು ನೆಚ್ಚಿಕೊಂಡ ಕಾರಣ ಹಣಕಾಸು ವಂಚನೆವಿಪರೀತ ಹೆಚ್ಚಾಗಿದೆ .

ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ವಿವಿಧ ತಪ್ಪು ಮಾಹಿತಿ, ನಕಲಿ ಸುದ್ದಿ ಇತ್ಯಾದಿಗಳ ಮೂಲಕ ವಂಚನೆ ನಡೆಯುತ್ತದೆ. ಸೈಬರ್‌ಲೋಕದಲ್ಲಿರುವ ಮಾಹಿತಿಭಂಡಾರವೇಇದ್ದು ಮಾಹಿತಿ ಕದಿಯುವುದರಿಂದ ನಮ್ಮ ನಾಗರಿಕರ ಗೌಪತ್ಯೆಗೆ ಧಕ್ಕೆಯಾಗುತ್ತದ. ಹಾಗಾಗಿ ಆನ್‌ಲೈನ್‌ನಲ್ಲಿರುವಾಗ ಮತ್ತು ಇಂಟರ್ನೆಟ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕು ಎಂದಿದ್ದಾರೆ

ಈ ರೀತಿಯ ಕಾರ್ಯಕ್ರಮ ಆಯೋಜಿಸಿದ ರಾಜ್ಯ ಸರ್ಕಾರ ಮತ್ತು ಕೇರಳ ಪೊಲೀಸರನ್ನು ಎನ್‌ಎಸ್‌ಎ ಶ್ಲಾಘಿಸಿದೆ.

ಸಮ್ಮೇಳನವನ್ನು ಉದ್ಘಾಟಿಸಿದ ಕೇರಳ ಗವರ್ನರ್ ಆರಿಫ್ ಮೊಹಮ್ಮದ್ ಖಾನ್, ಕೋವಿಡ್ -19ನಿಂದಾಗಿ ಜನರು ಅಂತರ್ಜಾಲವನ್ನು ಅವಲಂಬಿಸಿರುವುದರಿಂದ ನಾಗರಿಕರು ಆನ್‌ಲೈನ್‌ನಲ್ಲಿರುವಾಗ ಹೆಚ್ಚಿನ ಜಾಗರೂಕರಾಗಿರಬೇಕು ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.