ADVERTISEMENT

ಪಣಜಿ: ಶಾಸಕ, ಮೇಯರ್‌ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 18:38 IST
Last Updated 1 ಜೂನ್ 2019, 18:38 IST

ಪಣಜಿ: ಇಲ್ಲಿನ ಸ್ಥಳೀಯ ಸಂಸ್ಥೆ ಕೈಗೊಂಡಿದ್ದ ಒತ್ತುವರಿ ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪದ ಮೇಲೆ ಇಲ್ಲಿನ ಶಾಸಕ, ಮೇಯರ್‌, ಮಾಜಿ ಉಪ ಮೇಯರ್‌ ವಿರುದ್ಧ ಪ್ರಕರಣ ದಾಖಲಾಗಿದೆ.

ಈ ಸಂಬಂಧ ಪ್ರತಿಭಟನಾ ನಿರತರ ಮಹಿಳೆ ನೀಡಿದ ದೂರಿನ ಮೇರೆಗೆ ಪಣಜಿ ನಗರ ಠಾಣೆಯ ಪೊಲೀಸರು ಶಾಸಕ ಅಟನಾಸಿಯೊ ಮೊನ್ಸೆರೆಟ್‌, ಮೇಯರ್‌ ಉದಯ್‌ ಮಡ್ಕೈಕರ್ ಮತ್ತು ಮಾಜಿ ಉಪ ಮೇಯರ್‌ ಯತಿನ್‌ ಪರೇಖ್ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಎಲ್ಲರೂ ಕಾಂಗ್ರೆಸ್‌ ಮುಖಂಡರು.

ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 323 (ಹಲ್ಲೆ), 354 (ಲೈಂಗಿಕ ದೌರ್ಜನ್ಯ), 504 (ಶಾಂತಿ ಕದಡುವುದು), 506 (ಜೀವ ಬೆದರಿಕೆ) ಕಲಂಗಳಡಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪಿಎಸ್‌ಐ ಅರ್ಜುನ್‌ ಗವಾಸ್‌ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.