ADVERTISEMENT

ವಂದೇ ಭಾರತ್‌ ರೈಲಿಗೆ ಸಿಕ್ಕಿ ಸತ್ತ 4 ಎಮ್ಮೆಗಳು: ಮಾಲೀಕರ ವಿರುದ್ಧ ಎಫ್‌ಐಆರ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2022, 5:32 IST
Last Updated 8 ಅಕ್ಟೋಬರ್ 2022, 5:32 IST
ಎಮ್ಮೆಗಳಿಗೆ ಡಿಕ್ಕಿಯಾಗಿ ಹಾನಿಯಾದ ವಂದೇ ಭಾರತ್‌ ರೈಲು - ಪಿಟಿಐ ಚಿತ್ರ
ಎಮ್ಮೆಗಳಿಗೆ ಡಿಕ್ಕಿಯಾಗಿ ಹಾನಿಯಾದ ವಂದೇ ಭಾರತ್‌ ರೈಲು - ಪಿಟಿಐ ಚಿತ್ರ   

ಮುಂಬೈ/ಅಹಮದಾಬಾದ್‌: ಮುಂಬೈ–ಗಾಂಧಿನಗರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಅಹಮದಾಬಾದ್‌ನಲ್ಲಿ ಗುರುವಾರ ನಾಲ್ಕು ಎಮ್ಮೆಗಳಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು. ಇದಕ್ಕೆ ಸಂಬಂಧಿಸಿ, ಎಮ್ಮೆಗಳ ಮಾಲೀಕರ ವಿರುದ್ಧ ಗುಜರಾತ್‌ನ ರೈಲು ರಕ್ಷಣಾ ಪಡೆಯು ಪ್ರಕರಣ ದಾಖಲಿಸಿದೆ.

ರೈಲ್ವೆ ಪ್ರದೇಶಕ್ಕೆ ಅನಧಿಕೃತ ಪ್ರವೇಶ ಮತ್ತು ರೈಲ್ವೆ ಆಸ್ತಿಯ ದುರ್ಬಳಕೆ (ರೈಲ್ವೆ ಕಾಯ್ದೆ 1989ರ 147 ಸೆಕ್ಷನ್‌) ಅಡಿ ಗುರುವಾರ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪಶ್ಚಿಮ ರೈಲ್ವೆ ಹಿರಿಯ ವಕ್ತಾರ ಜಿತೇಂದ್ರ ಕುಮಾರ್‌ ಜಯಂತ್‌ ಹೇಳಿದರು.

‘ಘಟನೆಯಲ್ಲಿ ನಾಲ್ಕು ಎಮ್ಮೆಗಳು ಸಾವನ್ನಪ್ಪಿವೆ. ಎಮ್ಮೆಗಳ ಮಾಲೀಕರ ಮೇಲೆ ಎಫ್‌ಐಆರ್‌ ದಾಖಲು ಮಾಡಲಾಗಿದೆ. ಆದರೆ, ಮಾಲೀಕರು ಯಾರು ಎಂಬುದು ಪತ್ತೆಯಾಗಿಲ್ಲ. ಈ ಕಾರ್ಯ ಪ್ರಗತಿಯಲ್ಲಿದೆ’ ಎಂದು ಅವರು ತಿಳಿಸಿ ದರು.

ADVERTISEMENT

ಹಾನಿಯಾಗಿದ್ದ ರೈಲಿನ ಭಾಗವನ್ನು 24 ಗಂಟೆಯಲ್ಲಿ ಸರಿಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.