ADVERTISEMENT

‘ಸೀರಂ ಸಂಸ್ಥೆಯಲ್ಲಿ ಬೆಂಕಿ: ಇದೊಂದು ಅಪಘಾತ’

ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಅಭಿಮತ

ಪಿಟಿಐ
Published 22 ಜನವರಿ 2021, 6:31 IST
Last Updated 22 ಜನವರಿ 2021, 6:31 IST
ಶರದ್‌ ಪವಾರ್
ಶರದ್‌ ಪವಾರ್   

ಮುಂಬೈ: ಪುಣೆ ಮೂಲದ ಔಷಧೀಯ ಕಂಪನಿ ಭಾರತೀಯ ಸೀರಂ ಇನ್‌ಸ್ಟಿಟ್ಯೂಟ್‌(ಎಸ್‌ಐಐ) ಆವರಣದಲ್ಲಿ ಸಂಭವಿಸಿರುವ ಸ್ಫೋಟ ಒಂದು ಅಪಘಾತ. ಈ ವಿಚಾರದಲ್ಲಿ ಕಂಪನಿಯ ವಿಜ್ಞಾನಿಗಳ ಸಮಗ್ರತೆ ವಿಚಾರದಲ್ಲಿ ಯಾವುದೇ ಅನುಮಾನವಿಲ್ಲ‘ ಎಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್ ಹೇಳಿದ್ದಾರೆ.

ಈ ವಿಧ್ವಂಸಕ ಕೃತ್ಯದ ಹಿಂದೆ ಯಾರದ್ದೋ ಕೈವಾಡವಿರಬಹುದೇ ಎಂದು ಕೊಲ್ಹಾಪುರದಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪವರ್ ‘ಇದೊಂದು ಆಕಸ್ಮಿಕ ಘಟನೆ. ಈ ಬಗ್ಗೆ ಮಾತನಾಡಲು ಇದು ಸಮಯವಲ್ಲ. ಆದರೆ ಸಿರಂ ಸಂಸ್ಥೆಯಲ್ಲಿ ಕೆಲಸ ಮಾಡುವ ತಜ್ಞರು, ವಿಜ್ಞಾನಿಗಳ ಸಮಗ್ರತೆಯ ಬಗ್ಗೆ ನಮಗೆ ಯಾವುದೇ ಸಂದೇಹವಿಲ್ಲ. ಇದೊಂದು ಅಪಘಾತ‘ ಎಂದರು.

ಭಾರತೀಯ ಸೀರಂ ಇನ್‌ಸ್ಟಿಟ್ಯೂಟ್‌ನ ಮಂಜರಿ ಆವರಣದಲ್ಲಿರುವ ಐದು ಅಂತಸ್ತಿನ ನಿರ್ಮಾಣ ಹಂತದಲ್ಲಿರುವ ಕಟ್ಟಡದಲ್ಲಿ ಬೆಂಕಿ ಅನಾಹುತ ಸಂಭವಿಸಿದೆ. ಘಟನೆಯಲ್ಲಿ ಐದು ಕಾರ್ಮಿಕರು ಮೃತಪಟ್ಟಿದ್ದಾರೆ.

ADVERTISEMENT

ಅವಘಡ ಸಂಭವಿಸಿರುವ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿರುವ ಕಟ್ಟಡದಲ್ಲಿ ದೇಶಾದ್ಯಂತ ‘ಕೋವಿಡ್‌ 19‘ ನಿಯಂತ್ರಣಕ್ಕಾಗಿ ವಿತರಿಸುತ್ತಿರುವ ಕೋವಿಶೀಲ್ಡ್ ಲಸಿಕೆ ತಯಾರಾಗುತ್ತಿದೆ.

ಪ್ರಕರಣದ ತನಿಖೆ ಮುಂದುವರಿದಿದ್ದು, ಬೆಂಕಿ ಅನಾಹುತಕ್ಕೆ ಕಾರಣವನ್ನು ಕಂಡು ಹಿಡಿಯಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.