ADVERTISEMENT

59 ಮಂದಿ ಮೃತಪಟ್ಟಿದ್ದ ದೆಹಲಿಯ ಉಪಹಾರ್‌ ಚಿತ್ರಮಂದಿರದಲ್ಲಿ ಮತ್ತೆ ಬೆಂಕಿ ಅವಘಡ

ಪಿಟಿಐ
Published 17 ಏಪ್ರಿಲ್ 2022, 8:53 IST
Last Updated 17 ಏಪ್ರಿಲ್ 2022, 8:53 IST
ಬೆಂಕಿ ಅವಘಡದಲ್ಲಿ ದೆಹಲಿಯ ಉಪಹಾರ್‌ ಸಿನಿಮಾ ಮಂದಿರಕ್ಕೆ ಹಾನಿಯಾಗಿರುವುದು
ಬೆಂಕಿ ಅವಘಡದಲ್ಲಿ ದೆಹಲಿಯ ಉಪಹಾರ್‌ ಸಿನಿಮಾ ಮಂದಿರಕ್ಕೆ ಹಾನಿಯಾಗಿರುವುದು   

ನವದೆಹಲಿ:ಇಂದು ಬೆಳಗಿನ ಜಾವ ದೆಹಲಿಯ ಉಪಹಾರ್‌ ಸಿನಿಮಾ ಮಂದಿರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಚಿತ್ರ ಮಂದಿರದ ಸೀಟ್‌ಗಳು, ಪೀಠೋಪಕರಣಗಳಿಗೆ ಬೆಂಕಿ ಹೊತ್ತಿದೆ. ಬಾಲ್ಕನಿಯಲ್ಲಿ ಹೆಚ್ಚಿನ ಹಾನಿಯಾಗಿದ್ದು, ಯಾರಿಗೂ ಗಾಯವಾಗಿರುವ ಬಗ್ಗೆ ವರದಿಯಾಗಿಲ್ಲ.

1997ರ ಜೂನ್‌ 13ರಂದು ಇದೇ ಚಿತ್ರ ಮಂದಿರದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಂಕಿ ಅನಾಹುತ ಸಂಭವಿಸಿತ್ತು. ಆ ದುರಂತದಲ್ಲಿ 59 ಮಂದಿ ಸಾವಿಗೀಡಾಗಿದ್ದರು ಹಾಗೂ ಸುಮಾರು 100 ಮಂದಿ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.