ADVERTISEMENT

ಫಿರಂಗಿದಳಕ್ಕೆ ಐವರು ಮಹಿಳಾ ಅಧಿಕಾರಿಗಳ ನಿಯೋಜನೆ

ಪಿಟಿಐ
Published 29 ಏಪ್ರಿಲ್ 2023, 12:24 IST
Last Updated 29 ಏಪ್ರಿಲ್ 2023, 12:24 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ನವದೆಹಲಿ: ಇದೇ ಮೊದಲ ಬಾರಿಗೆ ಭಾರತೀಯ ಸೇನೆಯು ಐವರು ಮಹಿಳಾ ಅಧಿಕಾರಿಗಳನ್ನು ಫಿರಂಗಿದಳಕ್ಕೆ (ಆರ್ಟಿಲರಿ ರೆಜಿಮೆಂಟ್) ನೇಮಿಸಿದೆ. 

ಚೆನ್ನೈನ ಅಧಿಕಾರಿಗಳ ತರಬೇತಿ ಅಕಾಡೆಮಿಯಲ್ಲಿ (ಒಟಿಎ) ಶನಿವಾರ ತರಬೇತಿ ಪೂರ್ಣಗೊಳಿಸಿದ ಬಳಿಕ ಮಹಿಳಾ ಅಧಿಕಾರಿಗಳು ಫಿರಂಗಿದಳಕ್ಕೆ ನಿಯೋಜನೆಗೊಂಡರು.

ಲೆಫ್ಟಿನೆಂಟ್‌ ಮೆಹಕ್‌ ಸೈನಿ, ಲೆಫ್ಟಿನೆಂಟ್‌ ಸಾಕ್ಷಿ ದುಬೆ, ಲೆಫ್ಟಿನೆಂಟ್‌ ಅದಿತಿ ಯಾದವ್‌, ಲೆಫ್ಟಿನೆಂಟ್‌ ಪಾಯಸ್‌ ಮುದ್ಗಿಲ್‌ ಅವರು ಪಿರಂಗಿದಳಕ್ಕೆ ನಿಯೋಜನಗೊಂಡಿದ್ದಾರೆ. ಐವರು ಅಧಿಕಾರಿಗಳಲ್ಲಿ ಮೂವರನ್ನು ಚೀನಾ ಗಡಿ ಬಳಿ ನಿಯೋಜಿಸಲಾಗಿರುವ ತುಕಡಿಗಳಿಗೆ ನೇಮಿಸಲಾಗಿದೆ, ಇನ್ನಿಬ್ಬರನ್ನು ಪಾಕಿಸ್ತಾನ ಗಡಿ ಬಳಿಯ ಸೇನಾ ಸರಹದ್ದು ಬಳಿ ನಿಯೋಜಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.

ADVERTISEMENT

ಫಿರಂಗಿದಳಕ್ಕೆ ಐವರು ಮಹಿಳಾ ಅಧಿಕಾರಿಗಳ ನಿಯೋಜನೆಯು ಭಾರತೀಯ ಸೇನೆಯಲ್ಲಿ ಸದ್ಯ ನಡೆಯುತ್ತಿರುವ ಪರಿವರ್ತನೆಗಳಿಗೆ ಸಾಕ್ಷಿಯಾಗಿದೆ ಎಂದು ಮೂಲಗಳು ತಿಳಿಸಿವೆ. 

ಮಹಿಳಾ ಅಧಿಕಾರಿಗಳನ್ನು ಫಿರಂಗಿದಳಕ್ಕೆ ಯೋಜಿಸುವ ನಿರ್ಧಾರವನ್ನು ಸೇನಾ ಮುಖ್ಯಸ್ಥ ಜನರಲ್‌ ಮನೋಜ್‌ ಪಾಂಡೆ ಅವರು ಜನವರಿಯಲ್ಲಿ ಘೋಷಿಸಿದ್ದರು. ಬಳಿಕ ಈ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.