ADVERTISEMENT

ಬೆಂಗಳೂರು–ಶ್ರೀನಗರಕ್ಕೆ ನೇರ ವಿಮಾನ ಸಂಚಾರ ಪುನರಾರಂಭ

‘ಕೋವಿಡ್‌ 19‘ನಿಂದಾಗಿ ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ವಿಮಾನ ಸಂಚಾರ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 9:05 IST
Last Updated 30 ಮಾರ್ಚ್ 2021, 9:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶ್ರೀನಗರ: ‘ಕೋವಿಡ್‌ 19‘ ನಂತರ ಒಂದು ವರ್ಷದ ಕಾಲ ಸ್ಥಗಿತಗೊಂಡಿದ್ದ ಬೆಂಗಳೂರು – ಶ್ರೀನಗರ ನಡುವಿನ ನೇರ ವಿಮಾನ ಹಾರಾಟ ಪುನಃ ಆರಂಭವಾಗಿದ್ದು, ಸೋಮವಾರ ಬೆಂಗಳೂರಿನಿಂದ ಹೊರಟ ವಿಮಾನ ಸಂಜೆ ಶ್ರೀನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.

ಸೋಮವಾರ ಮಧ್ಯಾಹ್ನ 3.35ಕ್ಕೆ ಬೆಂಗಳೂರಿನಿಂದ ಹೊರಟ ಇಂಡಿಗೊ ವಿಮಾನ, ಸಂಜೆ 7 ಗಂಟೆಗೆ ಶ್ರೀನಗರದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

‘ರಾತ್ರಿ ವಿಮಾನಗಳ ಸಂಚಾರ ಆರಂಭವಾಗಿದ್ದು, ಇದು ಸ್ಥಳೀಯರಿಗೆ ಮತ್ತು ಪ್ರವಾಸಿಗರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ‘ ಎಂದು ಶ್ರೀನಗರ ವಿಮಾನ ನಿಲ್ದಾಣ ಪ್ರಾಧಿಕಾರದ (ಎಎಐ) ನಿರ್ದೇಶಕ ಸಂತೋಷ್ ಧೋಕ್ ಹೇಳಿದ್ದಾರೆ.

ADVERTISEMENT

ಬೆಂಗಳೂರು-ಶ್ರೀನಗರ ನಡುವೆ ಪ್ರತಿ ದಿನ ವಿಮಾನಗಳು ಹಾರಾಟ ನಡೆಸಲಿವೆ. ಇದರ ಜತೆಗೆ ವಿವಿಧ ವಿಮಾನಯಾನ ಸಂಸ್ಥೆಗಳ ಶ್ರೀನಗರ ಮತ್ತು ಕೋಲ್ಕತ್ತಾ, ಅಹಮದಾಬಾದ್ ಮತ್ತು ಮುಂಬೈನಂತಹ ವಿವಿಧ ನಗರಗಳ ನಡುವೆ ನೇರ ವಿಮಾನ ಹಾರಾಟ ಆರಂಭಿಸಿವೆ ಎಂದು ಸಂತೋಷ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.