ADVERTISEMENT

ಅಫ್ಗಾನಿಸ್ತಾನಕ್ಕೆ ಆಗಮಿಸಿದ ಪಾಕಿಸ್ತಾನದ ವಾಣಿಜ್ಯ ವಿಮಾನ

ಏಜೆನ್ಸೀಸ್
Published 13 ಸೆಪ್ಟೆಂಬರ್ 2021, 6:48 IST
Last Updated 13 ಸೆಪ್ಟೆಂಬರ್ 2021, 6:48 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾಬೂಲ್‌: ಪಾಕಿಸ್ತಾನದ ಅಂತರರಾಷ್ಟ್ರೀಯ ವಿಮಾನವು ಸೋಮವಾರ ಕೆಲವೇ ಮಂದಿ ಪ್ರಯಾಣಿಕರೊಂದಿಗೆ ಕಾಬೂಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದೆ.

ಆಗಸ್ಟ್‌ 15ರಂದು ಅಫ್ಗಾನಿಸ್ತಾನ ತಾಲಿಬಾನ್‌ ಕೈವಶವಾದ ಬಳಿಕ ಅಫ್ಗನ್‌ಗೆ ಆಗಮಿಸಿದ ಮೊದಲ ಅಂತರರಾಷ್ಟ್ರೀಯ ವಾಣಿಜ್ಯ ವಿಮಾನ ಇದಾಗಿದೆ.

‘ವಿಮಾನದಲ್ಲಿ ಸುಮಾರು 10 ಪ್ರಯಾಣಿಕರಿದ್ದರು. ಅವರಲ್ಲೂ ಹೆಚ್ಚಿನವರು ಪ್ರಯಾಣಿಕರ ಬದಲು ವಿಮಾನದ ಸಿಬ್ಬಂದಿಯೇ ಆಗಿರುವ ಸಾಧ್ಯತೆ ಇದೆ’ ಎಂದು ಇಸ್ಲಾಮ್‌ಬಾದ್‌ನಲ್ಲಿ ಈ ವಿಮಾನ ಏರಿದ್ದ ಎಎಫ್‌ಪಿ ಪತ್ರಕರ್ತರೊಬ್ಬರು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.