ADVERTISEMENT

‘ಒಂದು ದೇಶ, ಒಂದು ಚುನಾವಣೆ’; 8ರಂದು ಮೊದಲ ಸಭೆ

ಪಿಟಿಐ
Published 23 ಡಿಸೆಂಬರ್ 2024, 16:03 IST
Last Updated 23 ಡಿಸೆಂಬರ್ 2024, 16:03 IST
<div class="paragraphs"><p>ಚುನಾವಣೆ</p></div>

ಚುನಾವಣೆ

   

(ಸಾಂದರ್ಭಿಕ ಚಿತ್ರ)

ನವದೆಹಲಿ: ಒಂದು ರಾಷ್ಟ್ರ– ಒಂದು ಚುನಾವಣೆಗೆ ಸಂಬಂಧಿಸಿದಂತೆ 39 ಮಂದಿ ಸದಸ್ಯರನ್ನು ಒಳಗೊಂಡ ಸಂಸದೀಯ ಸಮಿತಿ ಮೊದಲ ಸಭೆಯು ಜ.8ರಂದು ನಡೆಯಲಿದೆ. 

ADVERTISEMENT

ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಯನ್ನು ಮಂಡಿಸುವ ಉದ್ದೇಶ ಹೊಂದಿದ್ದ ಮಸೂದೆ ಕುರಿತಾದ ಜಂಟಿ ಸಮಿತಿ ಸಭೆಯು ಬಿಜೆಪಿಯ ಸದಸ್ಯ ಪಿ.ಪಿ. ಚೌಧರಿ ನೇತೃತ್ವದಲ್ಲಿ ನಡೆಯಲಿದೆ. ಈ ವೇಳೆ ಅಧಿಕಾರಿಗಳು ಮಸೂದೆ ಕುರಿತಂತೆ ವಿವರ ನೀಡಲಿದ್ದಾರೆ.

ಸಂವಿಧಾನ (129ನೇ ತಿದ್ದುಪಡಿ) ಮಸೂದೆ–2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳ ಮಸೂದೆ– 2024 ಅನ್ನು ಕಳೆದ ವಾರ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಚಳಿಗಾಲದ ಅಧಿವೇಶನದ ಕೊನೆಯ ದಿನ ಜಂಟಿ ಸದನ ಸಮಿತಿಗೆ ಒಪ್ಪಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.