ADVERTISEMENT

ಏರ್‌ ಇಂಡಿಯಾದ ಐವರು ಪೈಲಟ್‌ಗಳಿಗೆ ಕೊರೊನಾ ಇಲ್ಲ: ಎರಡನೇ ಪರೀಕ್ಷೆಯಲ್ಲಿ ನೆಗೆಟಿವ್

ಏಜೆನ್ಸೀಸ್
Published 12 ಮೇ 2020, 5:06 IST
Last Updated 12 ಮೇ 2020, 5:06 IST
ಏರ್‌ ಇಂಡಿಯಾ ವಿಮಾನ (ಸಂಗ್ರಹ ಚಿತ್ರ)
ಏರ್‌ ಇಂಡಿಯಾ ವಿಮಾನ (ಸಂಗ್ರಹ ಚಿತ್ರ)   

ನವದೆಹಲಿ: ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆಯ ಐವರು ಪೈಲಟ್‌ಗಳಿಗೆ ಕೋವಿಡ್–19 ಸೋಂಕು ತಗುಲಿಲ್ಲ ಎಂಬುದು ಎರಡನೇ ಬಾರಿಯ ಪರೀಕ್ಷೆಯಲ್ಲಿ ದೃಢಪಟ್ಟಿದೆ. ಮೊದಲ ಬಾರಿ ನಡೆಸಿದ್ದ ಪರೀಕ್ಷೆಯಲ್ಲಿ ಇವರಿಗೆ ಸೋಂಕು ತಗುಲಿದೆ ಎಂದು ವರದಿ ಬಂದಿತ್ತು.

ವಿಮಾನ ಹಾರಾಟ ನಡೆಸುವುದಕ್ಕೂ 72 ಗಂಟೆಗಳ ಮೊದಲು ಪೈಟಲ್‌ಗಳ ಗಂಟಲಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಿಗೆ ಕೋವಿಡ್ ತಗುಲಿದೆ ಎಂದು ಭಾನುವಾರ ವರದಿಯಾಗಿತ್ತು. ಆದರೆ, ಈ ಐವರೂ ಪೈಲಟ್‌ಗಳಲ್ಲಿ ಸೋಂಕಿನ ಯಾವುದೇ ಲಕ್ಷಣಗಳು ಇರಲಿಲ್ಲ. ಹೀಗಾಗಿ ಮತ್ತೊಮ್ಮೆ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿದೆ.

ಈ ಐವರು ಚೀನಾಕ್ಕೆ ಸರಕುಸಾಗಣೆ ವಿಮಾನವನ್ನು ಚಲಾಯಿಸಿದ್ದರು ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿದ್ದವು.

ಈ ಮಧ್ಯೆ, ಏರ್‌ ಇಂಡಿಯಾ ಸಂಸ್ಥೆಯ ಒಬ್ಬರು ಟೆಕ್ನಿಷಿಯನ್ ಮತ್ತು ಚಾಲಕರೊಬ್ಬರಿಗೂ ಕೊರೊನಾ ಸೋಂಕು ತಗುಲಿದ ಬಗ್ಗೆ ವರದಿಯಾಗಿದೆ. ಅವರನ್ನೂ ಮರು ಪರೀಕ್ಷೆಗೆ ಒಳಪಡಿಸಲಾಗುತ್ತದೆಯೇ ಅಥವಾ ಕ್ವಾರಂಟೈನ್‌ಗೆ ಒಳಪಡಿಸುತ್ತಾರೆಯೇ ಎಂಬುದು ಇನ್ನೂ ತಿಳಿದುಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.