ADVERTISEMENT

ದೆಹಲಿ ಹೈಕೋರ್ಟ್: ಸೆ.1ರಿಂದ ಎಂದಿನಂತೆ ಕಲಾಪ

ಪಿಟಿಐ
Published 27 ಆಗಸ್ಟ್ 2020, 12:15 IST
Last Updated 27 ಆಗಸ್ಟ್ 2020, 12:15 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ದೆಹಲಿ ಹೈಕೋರ್ಟ್‌ನ ಐದು ಪೀಠಗಳು ಸೆಪ್ಟೆಂಬರ್‌ 1 ರಿಂದ ಪಾಳಿ ಆಧಾರದಲ್ಲಿ ಎಂದಿನಂತೆ ಕಲಾಪ ನಡೆಸಲಿವೆ.ಈ ಸಂಬಂಧ, ಮಾರ್ಗದರ್ಶಿ ಸೂತ್ರಗಳನ್ನು (ಎಸ್‌ಒಪಿ) ಹೊರಡಿಸಲಾಗಿದೆ.ಉಳಿದ ಪೀಠಗಳುವಿಡಿಯೊ ಕಾನ್ಫರೆನ್ಸ್ ಮೂಲಕವೇ ವಿಚಾರಣೆ ನಡೆಸಲಿವೆ.

ವಿಚಾರಣೆಗೆ ಹಾಜರಾಗುವವರ ಪ್ರವೇಶ ಸೇರಿದಂತೆ ಹಲವು ನಿರ್ಬಂಧ ವಿಧಿಸಲಾಗಿದೆ. ಕಕ್ಷಿದಾರರ ಪರ ಒಬ್ಬ ವಕೀಲರಿಗಷ್ಟೇ ಪ್ರವೇಶ ಇರುತ್ತದೆ ಎಂದು ಎಸ್‌ಒಪಿಯಲ್ಲಿ ತಿಳಿಸಲಾಗಿದೆ.ಕೋವಿಡ್-19 ಪರಿಸ್ಥಿತಿಯಿಂದಾಗಿ ಹೈಕೋರ್ಟ್‌ ಮಾರ್ಚ್ 24ರಿಂದಲೂ ವಿಡಿಯೊ ಕಾನ್ಫರೆನ್ಸ್ ಮೂಲಕ ಕಲಾಪ ನಡೆಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT