ADVERTISEMENT

ಏಮ್ಸ್‌: 5 ಸರ್ವರ್‌ಗಳ ಮೇಲೆ ಸೈಬರ್ ದಾಳಿ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2023, 17:18 IST
Last Updated 10 ಫೆಬ್ರುವರಿ 2023, 17:18 IST
   

ನವದೆಹಲಿ: ತಾಂತ್ರಿಕ ವಿಶ್ಲೇಷಣೆಯ ಪ್ರಕಾರ, ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಏಮ್ಸ್) ಒಟ್ಟು ಐದು ಸರ್ವರ್‌ಗಳು ಸೈಬರ್ ದಾಳಿಯಿಂದ ಬಾಧಿತವಾಗಿವೆ ಎಂದು ಕೇಂದ್ರ ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಶುಕ್ರವಾರ ಹೇಳಿದ್ದಾರೆ.

ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ -ಇನ್) ಏಮ್ಸ್ ಮೇಲಿನ ಸೈಬರ್ ದಾಳಿಯನ್ನು ಮೌಲ್ಯಮಾಪನ ಮಾಡಿದೆ. ಸಿಇಆರ್‌ಟಿ -ಇನ್ ಮತ್ತು ಇತರ ಪಾಲುದಾರ ಘಟಕಗಳು ಅಗತ್ಯ ಪರಿಹಾರ ಕ್ರಮಗಳನ್ನು ಸೂಚಿಸಿವೆ ಎಂದು ಸಚಿವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ. ದೆಹಲಿಯ ಏಮ್ಸ್ ನ.23 ರಂದು ಸೈಬರ್ ದಾಳಿಗೆ ಒಳಗಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT