ಮುಂಬೈ: ಶಿವಸೇನಾ ಮುಖಂಡ, ಐದು ಬಾರಿ ಸಂಸದರಾಗಿದ್ದ ಮೋಹನ ರಾವಲೆ (72) ಅವರು ಶನಿವಾರ ಗೋವಾದಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು.
ದಕ್ಷಿಣ ಮಧ್ಯ ಮುಂಬೈ ಲೋಕಸಭಾ ಕ್ಷೇತ್ರವನ್ನು ಅವರು ಐದು ಬಾರಿ ಪ್ರತಿನಿಧಿಸಿದ್ದರು.
‘ಮೋಹನ ರಾವಲೆ ಅವರು ನಿಧನರಾದರು. ಅವರು ನಿಜವಾದ ಶಿವಸೈನಿಕ ಹಾಗೂ ವಿಶಾಲ ಹೃದಯದ ಸ್ನೇಹಿತರಾಗಿದ್ದರು’ ಎಂದು ಶಿವಸೇನಾ ಮುಖಂಡ ಸಂಜಯ್ ರಾವತ್ ಟ್ವೀಟ್ ಮಾಡಿದ್ದಾರೆ.
ಕೆಲ ಭಿನ್ನಾಭಿಪ್ರಾಯಗಳ ಕಾರಣ 2013ರಲ್ಲಿ ಶಿವಸೇನೆ ತೊರೆದಿದ್ದ ಮೋಹನ್ ಅವರು ಬಳಿಕ ಮತ್ತೆ ಶಿವಸೇನೆ ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.