ADVERTISEMENT

ದೆಹಲಿ: ರಸ್ತೆ ಪಕ್ಕ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಹೆಬ್ಬಾವು

ಏಜೆನ್ಸೀಸ್
Published 17 ಸೆಪ್ಟೆಂಬರ್ 2020, 6:28 IST
Last Updated 17 ಸೆಪ್ಟೆಂಬರ್ 2020, 6:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿಯತುಘಲಕಾಬಾದ್ ಪ್ರದೇಶದಲ್ಲಿ ನಿಂತಿದ್ದ ಆಟೋರಿಕ್ಷಾವೊಂದರಲ್ಲಿ ಐದು ಅಡಿಯಷ್ಟು ಉದ್ದದ ಹೆಬ್ಬಾವು ಕಾಣಿಸಿಕೊಂಡಿದ್ದು, ಜನರಲ್ಲಿ ಅಚ್ಚರಿ ಜೊತೆಗೆ ಆತಂಕ ಮೂಡಿಸಿದೆ.

ರಸ್ತೆ ಪಕ್ಕದಲ್ಲಿ ನಿಲ್ಲಿಸಿದ್ದ ಆಟೋರಿಕ್ಷಾದಲ್ಲಿ ಬುಧವಾರ ಬೆಳಿಗ್ಗೆ ಹಾವು ಕಾಣಿಸಿಕೊಂಡಿದೆ. ಆ ವೇಳೆ ಆಟೋದಲ್ಲಿ ಯಾರೂ ಇರಲಿಲ್ಲ ಎಂದು ‘ವೈಲ್ಡ್‌ಲೈಫ್‌ ಸೇವ್‌ ಅವರ ಲೈವ್ಸ್ (ಎಸ್‌ಒಎಸ್‌)’ ಎನ್‌ಜಿಒದ ಸದಸ್ಯರೊಬ್ಬರು ತಿಳಿಸಿದ್ದಾರೆ.

ವಾಹನದಲ್ಲಿ ಹಾವು ಇರುವುದನ್ನು ಗಮನಿಸಿದ ಚಾಲಕ ಕೂಡಲೇ ಎನ್‌ಜಿಒ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಸಂಘಟನೆಯ ಇಬ್ಬರು ಸದಸ್ಯರು ಹೆಬ್ಬಾವನ್ನು ರಕ್ಷಿಸಿದ್ದಾರೆ. ಬಳಿಕ ಅದನ್ನು ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

ADVERTISEMENT

ಈ ಬಗ್ಗೆ ಮಾತನಾಡಿರುವ ವೈಲ್ಡ್‌ಲೈವ್‌ ಎಸ್‌ಒಎಸ್‌ನ ಸಂಸ್ಥಾಪಕ ಮತ್ತು ಸಿಇಒ ಕಾರ್ತಿಕ್‌ ಸತ್ಯನಾರಾಯಣ್‌, ‘ಹಾವನ್ನು ನಿಭಾಯಿಸುವುದು ಸವಾಲಿನ ವಿಚಾರ. ಆದರೆ, ನಮ್ಮ ತಂಡಕ್ಕೆ ಇಂತಹ ಸೂಕ್ಷ್ಮ ಕಾರ್ಯಾಚರಣೆ ನಡೆಸುವ ಬಗ್ಗೆ ತರಬೇತಿ ನೀಡಲಾಗಿದೆ. ನಗರ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಮೂಲಕ, ಇಲ್ಲಿನ ಕಷ್ಟಕರವಾದ ಸನ್ನಿವೇಶದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪರದಾಡುವ ಸರಿಸೃಪಗಳಿಗೆ ಈ ಹೆಬ್ಬಾವು ಉತ್ತಮ ಉದಾಹರಣೆಯಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.