ADVERTISEMENT

ಸಂದರ್ಭಾನುಸಾರ ದರ ಏರಿಳಿಕೆ ವ್ಯವಸ್ಥೆ ಪರಿಶೀಲನೆಗೆ ರೈಲ್ವೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2018, 16:56 IST
Last Updated 14 ಸೆಪ್ಟೆಂಬರ್ 2018, 16:56 IST
   

ನವದೆಹಲಿ:ಐಷಾರಾಮಿ ರೈಲುಗಳಲ್ಲಿಪರಿಸ್ಥಿತಿಗೆ ಅನುಗುಣವಾಗಿ ಟಿಕೆಟ್‌ ದರ ಏರಿಸುವ ಮತ್ತು ಇಳಿಸುವ ಯೋಜನೆಯನ್ನು (ಫ್ಲೆಕ್ಸಿ ಫೇರ್‌ ಸಿಸ್ಟಂ) ಪುನರ್‌ಪರಿಶೀಲಿಸಲು ಭಾರತೀಯ ರೈಲ್ವೆ ಉದ್ದೇಶಿಸಿದೆ.

ಈ ರೈಲುಗಳ ಪ್ರಯಾಣ ದರ ಬಸ್‌ ಅಥವಾ ವಿಮಾನ ಪ್ರಯಾಣ ದರಕ್ಕಿಂತಲೂ ಹೆಚ್ಚಾಗಿದೆ ಎಂಬ ಟೀಕೆ ವ್ಯಕ್ತವಾಗಿತ್ತು. ಈ ರೈಲುಗಳಲ್ಲಿನ ಪ್ರಯಾಣಕ್ಕಿಂತಲೂ ವಿಮಾನ ಪ್ರಯಾಣ ಅಗ್ಗವಾಗಿದೆ ಎಂದು ಸಿಎಜಿ ಕೂಡ ಅಸಮಾಧಾನ ವ್ಯಕ್ತಪಡಿಸಿತ್ತು.

ಶೇ 40ಕ್ಕಿಂತಲೂ ಕಡಿಮೆ ಸೀಟುಗಳು ಭರ್ತಿಯಾಗುವ ಕೆಲವು ಮಾರ್ಗಗಳಲ್ಲಿ ಈ ಯೋಜನೆ ಜಾರಿಯಲ್ಲಿತ್ತು. ಇದನ್ನು ರದ್ದು ಪಡಿಸಿ, ಕಡಿಮೆ ಪ್ರಯಾಣಿಕರ ದಟ್ಟಣೆ ಇರುವ ಮಾರ್ಗಗಳಲ್ಲಿ ನಾಲ್ಕು ದಿನ ಮೊದಲು ಟಿಕೆಟ್‌ ಕಾಯ್ದಿರಿಸಿದವರಿಗೆ ಶೇ 50ರಷ್ಟು ರಿಯಾಯಿತಿ ಘೋಷಿಸುವ ಬಗ್ಗೆ ರೈಲ್ವೆ ಚಿಂತಿಸುತ್ತಿದೆ.

ADVERTISEMENT

2016ರಲ್ಲಿ ರಾಜಧಾನಿ, ಶತಾಬ್ದಿ, ತುರಂತ್‌ ಸೇರಿದಂತೆ 142 ಐಷಾರಾಮಿ ರೈಲುಗಳಲ್ಲಿ ಈ ಸೌಲಭ್ಯ ಜಾರಿಗೆ ತರಲಾಗಿತ್ತು. ಈ ಯೋಜನೆಯಿಂದ ರೈಲ್ವೆಗೆ ವರ್ಷಕ್ಕೆ ₹200 ಕೋಟಿ ವರಮಾನ ಸಿಗುತ್ತಿತ್ತು.

ಈ ವ್ಯವಸ್ಥೆ ಜಾರಿಗೆ ಬಂದ ನಂತರ, ಅಂದರೆ 2016ರ ಸೆಪ್ಟೆಂಬರ್‌ನಿಂದ ಜುಲೈವರೆಗೆ ಈ ರೈಲುಗಳಲ್ಲಿ 2.40 ಕೋಟಿ ಪ್ರಯಾಣಿಕರು ಪ್ರಯಾಣಿಸಿದ್ದರೆ, ಈ ಯೋಜನೆ ಜಾರಿಗೆ ಬರುವ ಮೊದಲು ಅಂದರೆ, 2015ರ ಸೆಪ್ಟೆಂಬರ್‌ನಿಂದ ಜುಲೈ ಅವಧಿಯಲ್ಲಿ 2.47 ಕೋಟಿ ಜನ ಪ್ರಯಾಣಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.