ADVERTISEMENT

ರೋಜ್‌ಗಾರ್‌ ಮೇಳವು ಯುವಕರಿಗೆ ಉದ್ಯೋಗದ ಖಚಿತತೆ ನೀಡಿದೆ: ನಿರ್ಮಲಾ ಸೀತಾರಾಮನ್‌

ಪಿಟಿಐ
Published 22 ಅಕ್ಟೋಬರ್ 2022, 13:33 IST
Last Updated 22 ಅಕ್ಟೋಬರ್ 2022, 13:33 IST
ಐಸಿಎಫ್‌ ಚೆನ್ನೈನಲ್ಲಿ ನಡೆದ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ | ಪಿಟಿಐ ಚಿತ್ರ
ಐಸಿಎಫ್‌ ಚೆನ್ನೈನಲ್ಲಿ ನಡೆದ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ | ಪಿಟಿಐ ಚಿತ್ರ   

ಚೆನ್ನೈ: ಇಂಜಿನಿಯರಿಂಗ್‌ ಪದವೀದರರಿಗೆ ಹಾಗೂ ಪ್ಲಸ್‌ ಟು ವರೆಗೆ ಶಿಕ್ಷಣ ಪಡೆದವರಿಗೂ ಕೇಂದ್ರ ಸರ್ಕಾರದ 'ರೋಜ್‌ಗಾರ್‌ ಮೇಳ'ವು ಉದ್ಯೋಗ ಅವಕಾಶಗಳನ್ನು ಕಲ್ಪಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ರೋಜ್‌ಗಾರ್‌ ಯೋಜನೆಯ ಅಂಗವಾಗಿ ಶನಿವಾರ ಐಸಿಎಫ್‌ ಚೆನ್ನೈನಲ್ಲಿ ನಡೆದ ನೇಮಕಾತಿ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇಂದ್ರ ನಾನಾ ವಿಭಾಗಗಳಿಗೆ ನೂತನವಾಗಿ ನೇಮಕಗೊಂಡ ಆಕಾಂಕ್ಷಿಗಳಿಗೆ ಪ್ರಮಾಣ ಪತ್ರ ನೀಡಿ, ಅಭಿನಂದನೆ ಸಲ್ಲಿಸಿದರು. ಈ ಕಾರ್ಯಕ್ರಮವು ಯುವಕರಿಗೆ ಉದ್ಯೋಗ ಅವಕಾಶಗಳು ಇರುವ ಬಗ್ಗೆ ಖಚಿತಪಡಿಸುತ್ತಿದೆ ಎಂದರು.

ತವರು ರಾಜ್ಯದಲ್ಲೇ ಓರ್ವ ಆದಾಯ ತೆರಿಗೆ ಇಲಾಖೆಗೆ ಇನ್‌ಸ್ಪೆಕ್ಟರ್‌ ಆಗಿ, ಮತ್ತೊರ್ವ ಬ್ಯಾಂಕ್‌ನಲ್ಲಿ ಪರೀಕ್ಷಾರ್ಥ ಅಧಿಕಾರಿಯಾಗಿ, ಮಗದೊಬ್ಬ ಜಿಎಸ್‌ಟಿ ಇನ್‌ಸ್ಪೆಕ್ಟರ್‌ ಆಗಿದ್ದಾರೆ. ಹೀಗೆ ಹಲವು ಯುವಕರಿಗೆ ತವರಿನಲ್ಲೇ ಉದ್ಯೋಗಾವಕಾಶಗಳು ಸಿಕ್ಕಿವೆ ಎಂದು ನಿರ್ಮಲಾ ಸೀತಾರಾಮನ್‌ ಹೇಳಿದರು. ಈ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ಆಗಿ ಚಾಲನೆ ನೀಡದರು.

ADVERTISEMENT

ಜಾರ್ಖಂಡ್‌ ಮತ್ತು ಉತ್ತರ ಪ್ರದೇಶದ ಆಕಾಂಕ್ಷಿಗಳೂ ಸೇರಿದಂತೆ ಸುಮಾರು 250 ಮಂದಿಗೆ ಉದ್ಯೋಗ ದೃಢೀಕರಣ ಪತ್ರ ವಿತರಿಸಲಾಯಿತು. 25 ಮಂದಿಗೆ ಸ್ವತಃ ನಿರ್ಮಲಾ ಸೀತಾರಾಮನ್‌ ಅವರು ನೇಮಕಾತಿ ಪತ್ರ ನೀಡಿದರು.

ರೋಜ್‌ಗಾರ್‌ ಮೇಳವು 10 ಲಕ್ಷ ಸಿಬ್ಬಂದಿಯನ್ನು ನೇಮಕಾತಿ ಮಾಡುವ ಅಭಿಯಾನವಾಗಿದೆ. ಈ ಸಮಾರಂಭದಲ್ಲಿ ಮೊದಲ ಹಂತದಲ್ಲಿ 75 ಸಾವಿರ ನೌಕರರಿಗೆ ಇಂದು ನೇಮಕಾತಿ ಪತ್ರ ನೀಡಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.