ADVERTISEMENT

ಬಿಜೆಪಿಯನ್ನು ದೂರವಿಡಲು ಅಂಬೇಡ್ಕರ್ ಅನುಯಾಯಿಗಳು ಎಸ್‌ಪಿ ಸೇರಬೇಕು: ಅಖಿಲೇಶ್

ಪಿಟಿಐ
Published 3 ಫೆಬ್ರುವರಿ 2022, 13:57 IST
Last Updated 3 ಫೆಬ್ರುವರಿ 2022, 13:57 IST
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್   

ಬುಲಂದ್‌ಶಹರ್: ಬಿಜೆಪಿಯನ್ನುಅಧಿಕಾರದಿಂದ ದೂರವಿಡಲು ಡಾ. ಅಂಬೇಡ್ಕರ್ ಅನುಯಾಯಿಗಳು ತಮ್ಮ ಪಕ್ಷವನ್ನು ಸೇರ್ಪಡೆಗೊಳ್ಳಬೇಕು ಎಂದು ಸಮಾಜವಾದಿ ಪಕ್ಷದ (ಎಸ್‌ಪಿ) ಅಧ್ಯಕ್ಷ ಅಖಿಲೇಶ್ ಯಾದವ್ ಕರೆ ನೀಡಿದ್ದಾರೆ.

ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ತಮ್ಮ ಪ್ರಯತ್ನಕ್ಕೆ ಎಲ್ಲರೂ ಕೈಜೋಡಿಸಬೇಕು. ಈ ಮೂಲಕ ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸಬಹುದು ಮತ್ತು ಜನರನ್ನು ರಕ್ಷಿಸಬಹುದು ಎಂದು ಹೇಳಿದರು.

ಒಂದು ವೇಳೆ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ರಕ್ಷಿಸಲು ಸಾಧ್ಯವಾಗದಿದ್ದರೆ ನಮ್ಮ ಹಕ್ಕಿಗೆ ಏನು ಸಂಭವಿಸಬಹುದು ಎಂಬುದನ್ನು ಯೋಚಿಸಿ ನೋಡಿ ಎಂದು ಹೇಳಿದ್ದಾರೆ.

ನಮ್ಮ ಪಕ್ಷದಲ್ಲಿ ಬಹು ಬಣ್ಣದ ಜನರು ಒಳಗೊಂಡಿದ್ದಾರೆ. ಕೆಂಪು, ಹಸಿರು, ಬಿಳಿ ಮತ್ತು ನೀಲಿ ಹೀಗೆ ಎಲ್ಲ ಬಣ್ಣದ ಜನರು ನಮ್ಮ ಪಕ್ಷದಲ್ಲಿದ್ದಾರೆ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ದ ವಾಗ್ದಾಳಿ ನಡೆಸಿರುವ ಅಖಿಲೇಶ್, ರಾಜ್ಯದ ಯುವ ಜನತೆಯು ಉದ್ಯೋಗವನ್ನು ಕಸಿದುಕೊಂಡಿರುವ ಬಿಜೆಪಿಯನ್ನು ಸೋಲಿಸಲಿದೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.