ADVERTISEMENT

ಮುಂಬೈ: ಮೇಲ್ಸೇತುವೆ ಕುಸಿದು 5 ಜನರ ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2019, 18:45 IST
Last Updated 14 ಮಾರ್ಚ್ 2019, 18:45 IST
   

ಮುಂಬೈ: ನಗರದ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ ಬಳಿ ಮೇಲ್ಸೇತುವೆ ಕುಸಿದು ಐದು ಮಂದಿ ಸಾವಿಗೀಡಾಗಿದ್ದಾರೆ.

ಗುರುವಾರ ಸಂಜೆ, 7.30ರ ಹೊತ್ತಿಗೆ ಇದ್ದಕ್ಕಿದ್ದಂತೆ ಮೇಲ್ಸೇತುವೆ ಕುಸಿಯಿತು. ಸಂಜೆ ಜನಸಾಂದ್ರತೆ ಹೆಚ್ಚಾಗಿರುವ ಹೊತ್ತಿನಲ್ಲಿಯೇ ಕುಸಿದಿದ್ದರಿಂದ 36 ಜನರು ಗಾಯಗೊಂಡಿದ್ದಾರೆ.

ಮೃತರಲ್ಲಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಅವರಿಬ್ಬರೂ ಜಿಟಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.

ADVERTISEMENT

1984ರಲ್ಲಿ ನಿರ್ಮಿಸಲಾಗಿದ್ದ ಈ ಮೇಲ್ಸೇತುವೆ ಛತ್ರಪತಿ ಶಿವಾಜಿ ಟರ್ಮಿನಲ್ಸ್‌ನ ಉತ್ತರ ಭಾಗದ ಮೊದಲ ಪ್ಲ್ಯಾಟ್‌ಫಾರ್ಮ್‌ ಹಾಗೂ ಬಿಟಿ ಲೇನ್‌ಗೆ ಸಂಪರ್ಕಕಲ್ಪಿಸುತ್ತಿತ್ತು.

ಕುಸಿದಿರುವ ಪಾದಾಚಾರಿ ಮೇಲ್ಸೇತುವೆ

ಹಲವು ಮಂದಿಅವಶೇಷಗಳಲ್ಲಿ ಸಿಲುಕಿಕೊಂಡಿರಬಹುದು ಎಂದುರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್‌ಡಿಆರ್‌ಎಫ್‌) ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.